Monday 29 April 2013

ಮಧುಗಿರಿ ಬೆಟ್ಟದ ಮೇಲೆ ಆರು ರಾಜರ ಆಕ್ರಮಣ...............................(Trek to Madhugiri Hill) 31-03-2013


ಮಧುಗಿರಿ:-
ಮಧುಗಿರಿ (3930 ft) ಇದು ಏಷಿಯಾದ ಖಂಡದ ಎರಡನೆ ಒಂದೇ ಕಲ್ಲಿನ(ಏಕ ಶಿಲಾ) ದೊಡ್ಡ ಬೆಟ್ಟ... ಜನರು ಇದನ್ನ "VERTICAL  LIMIT, DARING  TREK ಇತ್ಯಾದಿ ಇತ್ಯಾದಿಯಾಗಿ ಕರಿತಾರೆ. ಇದರ ಇನ್ನೊಂದು ವಿಶೇಷತೆಯೆಂದರೆ 11  ಗೋಡೆಗಳಿವೆ.. ಇದೊಂದು ಒಂದು ದಿನದ(ದಿನಕ್ಕೆಂದೇ ಹೇಳಿಮಾಡಿಸಿದ) ಮಸ್ತ್ ಟ್ರೆಕ್ಕಿಂಗ್ ಜಾಗ... ಇದರ ಬಗ್ಗೆ ಇನ್ನೂ  ಜಾಸ್ತಿ ತಿಳಿದುಕೋಬೇಕು ಅಂದ್ರೆ ಗೂಗಲ್ನಲ್ಲಿ ಸರ್ಚ್ ಮಾಡಿ:)

ಟ್ರೆಕ್ಕಿಂಗ್ ವಿವರ:-

ವ್ಯವಸ್ತಿತ ಪ್ಲಾನ್ ಪ್ರಕಾರ ಬೆಳಿಗ್ಗೆ 5ಕ್ಕೆ ಯಶವಂತಪುರ ಹತ್ತಿರ ಇರೋ ತಾಜ್ ವಿವಾಂತ ಹೋಟೆಲ್ ಇಂದ ಆರು ರಾಜರು ಮಧುಗಿರಿ ಬೆಟ್ಟಕ್ಕೆ ಆಕ್ರಮಣ ಮಾಡಲು ಹೊರೆಟೆವು... 
ಬೇಸಿಗೆ ಇದ್ದರು ಕೂಡ ಆ ದಿನ ಸ್ವಲ್ಪ ಮಂಜು ಕವಿದ ವಾತಾವರಣವಿತ್ತು.. ಮುಂಜಾನೆದ್ದು ಅಂತ ತಂಪಾದ ವಾತವರಣದಲ್ಲಿ ಹೈವೇ ಮೇಲೆ ಬೈಕ್ ರೈಡ್ ಮಾಡೋದು ಅಂದ್ರೆ ಆ ಮಜಾನೆ ಬೇರೆ.. ಆರು ರಾಜರು ಆಕ್ರಮಣಕ್ಕೆ ಬರ್ತಿದ್ದಾರೆ ದಾರಿ ಬಿಡಿ ಅಂತಿದ್ರೆನೋ .. ಹಾಗಿತ್ತು ಆ ಬೆಳಗಿನ ಜಾವದ ಬೈಕ್ ರೈಡಿಂಗ್ ... 
ಸುಮಾರು ಬೆಳಿಗ್ಗೆ 6ಕ್ಕೆ ದಾಬಸಪೇಟೆ ತಲುಪಿ ಅಲ್ಲಿಂದ ಸ್ವಲ್ಪ ಎಡ ತಿರುವು ತಗೆದುಕೊಂಡು ಮಧಿಗಿರಿ ದಾರೀಲಿ ಸಾಗಿತು ಈ ನಮ್ಮ ಆರು ರಾಜರ ಪ್ರಯಾಣ..... 
ಮಾರ್ಗ ಮದ್ಯ ಒಂದು ಚಿಕ್ಕ ಕೆರೆ ಸಿಕ್ಕಿತು ಅದು ಹೇಳಿ ಕೇಳಿ ಸೂರ್ಯೋದಯದ ಸಮಯ.. ಅದುನ್ನ ನಾವು ಮಿಸ್ ಮಾಡ್ಕೊಂತಿವಾ?
ಆ ಕೆರೆ ಹತ್ತಿರ ಹೋಗಿ ಸೂರ್ಯೋದಯವನ್ನು ಕಣ್ಣಾರೆ ಕಂಡು ಕನ್ನಡ ಅರಸು ಮೂವಿಯಲ್ಲಿ ಪುನೀತ್ ರಾಜಕುಮಾರ್ ಹೇಳೋ ಹಾಗೆ ವಾವ್  ಆ ಸನ್ರೈಸ್  ನೋಡ್ರಿ  ಅಂತ ಒಬ್ಬರಿಗೊಬ್ಬರು ಹೇಳುತ ಕುಣಿದಾಡಿದೆವು...:)
ಹಳ್ಳಿಯಲ್ಲಿರೋರಿಗೆ ಇದೊಂದು ಮಾಮೂಲಿ ಸೂರ್ಯೋದಯ ಅನ್ಸುತ್ತೆ ಆದ್ರೆ ಈ ಪ್ಯಾಟೆಯಲ್ಲಿರೋ ಜನರಿಗೆ ಅದು ಒಂದು ಪ್ರಕೃತಿಯ ಅದ್ಭುತವೇ ಸರಿ...  ಈ ಬೆಂಗಳೂರಿನಲ್ಲಿರೋ ಜನ ಬೆಳಿಗ್ಗೆ ಏಳೋದೇ ತುಂಬಾ ಲೇಟು ... ಅವರು ಏಳೋದ್ರೋಳ್ಗೆ ಸೂರ್ಯೋದಯವಾಗಿರುತ್ತೆ... ಅಪ್ಪಿ ತಪ್ಪಿ ಬೆಳಿಗ್ಗೆ ಬೇಗ ಎದ್ದಿದ್ದಾರೆ ಅನ್ಕೋರಿ ಸೂರ್ಯೋದಯದ ಸಮಯದಲ್ಲಿ ಆಫೀಸ್ ಒಳಗೆ ಹೊಕ್ಕಿರ್ತಾರೆ, ಹೊರಗೆ ಬರೋದೆ ಇಲ್ಲ... ಹೀಗಾಗಿ ಅವ್ರಿಗೆ ಸೂರ್ಯೋದಯ ಸೂರ್ಯಾಸ್ತ  ಯಾವಾಗ ಆಗುತ್ತೆ ಅಂತಾನೆ ಗೊತ್ತಿರೋದಿಲ್ಲ....... ಅದಕ್ಕೆ ಈ ಜನರಿಗೆ ಈ ಅನುಭವ ಅಂದರೆ ಏನೋ ಮನಸ್ಸಿಗೆ ಆನಂದ ಮತ್ತು ತೃಪ್ತಿ ಕೊಡುತ್ತೆ. ಅಂತು ಇಂತೂ ಸೂರ್ಯೋದಯ ನೋಡಿದ್ವಿ ಹಂಗೆ ಒಂದಿಷ್ಟು ಫೋಟೋಸ್ ತಗೊಂಡು ಮುಂದೆ ಸಾಗಿದೆವು..

ಸೂರ್ಯೋದಯ



ಕೊರಟಗೆರೆಯಲ್ಲಿ ಸರ್ಕಲ್ ನಲ್ಲಿ ಇರೋ ಒಂದು ಹೋಟೆಲ್ನಲ್ಲಿ ನಾಸ್ಟ ಮಾಡಿದ್ವಿ ... 
ಈ ಹೋಟೆಲ್ ಬಗ್ಗೆ ಒಂದೆರಡು ಮಾತು ಜಾಸ್ತೀನೇ ಹೇಳ್ಬೇಕು ಕಣ್ರೀ.. ಯಾಕಂದ್ರೆ ಚಿಕ್ಕದಾದರು ಚೊಕ್ಕ ಮತ್ತು ಒಳ್ಳೆ ಸವಿರುಚಿಯಾದ ರೈಸ್ ಬಾತ್ ಮತ್ತು ತಟ್ಟೆ ಇಡ್ಲಿ ಸಿಗುತ್ತೆ ... ಇದೆಲ್ಲ ಸಿಗೋದು ಅದು ತುಂಬಾ ಕಡಿಮೆ ಬೆಲೆಗೆ ...  ನೀವು ಕೂಡ ಈ ಮಾರ್ಗವಾಗಿ ಹೋದ್ರೆ ಈ ಹೋಟೆಲ್ನಲ್ಲಿ ನಾಸ್ಟ/ಊಟ ಮಾಡೋದನ್ನ ಮಾತ್ರ ಮರಿಬೇಡ್ರಿ... 
ಎಲ್ಲರೂ  ಹೊಟ್ಟೆ ತುಂಬಾ ನಾಸ್ಟ ಮಾಡಿದ್ವಿ... ಹೊಟ್ಟೆಗೆ ಇಂಧನ (fuel) ತುಂಬಿದ ಹಾಗಾಯ್ತು ನೋಡ್ರಿ..  ಅಲ್ಲಿಂದ ಮುಂದೆ ಸಾಗಿ ಬೆಳಿಗ್ಗೆ 8ಕ್ಕೆ ಮಧುಗಿರಿ ಮುಟ್ಟಿದೆವು... 

ಬೈಕ್ ಗಳನ್ನ  ಅಲ್ಲೇ ದೊಡ್ಡ ಮರದ ಕೆಳಗೆ ಪಾರ್ಕ್ ಮಾಡಿ ರೆಡಿ ಆದ್ವಿ ನೋಡ್ರಿ ಟ್ರೆಕ್ಕಿಂಗ್ ಮಾಡೋಕೆ.. ಟ್ರೆಕ್ಕಿಂಗ್  ಶುರು ಮಾಡೋದಕ್ಕೂ ಮೊದ್ಲೇ ಚೈತನ್ಯ ಹೇಳಿದ ಈ ಟ್ರೆಕ್ಕಿಂಗ್ ನಲ್ಲಿ ತುಂಬಾ ಟ್ವಿಸ್ಟ್ ಮತ್ತು surprises ಇವೆ ಅಂತ...
"HAMLA  KAROO" ಅನ್ನೋ ಜಯಗೋಸ್ಟಿಯೊಂದಿಗೆ ಬೆಳಿಗ್ಗೆ 8. 15ಕ್ಕೆ ಟ್ರೆಕ್ಕಿಂಗ್  ಚಾಲು ಮಾಡಿದ್ವಿ ನಮ್ಮ ಈ ಟ್ರೆಕಿಂಗ್ ಯುದ್ದ...
ಜಬರ್ದಸ್ತ್  ನಾಸ್ಟ ಮಾಡಿರಿ ನಡೀರಿನ್ನ ಟ್ರೆಕ್ಕಿಂಗ್ ಯುದ್ದಕ್ಕೆ 

ನಿಜ ಹೇಳ್ಬೇಕು ಅಂದ್ರೆ ಮಧುಗಿರಿ ಬೆಟ್ಟ, ಇದೊಂದು ಬೃಹದಾಕಾರದ ಕಲ್ಲು ಬಂಡೆ. ಕೆಳಗಡೆಯಿಂದ ನಿಂತು ನೋಡಿದ್ರೆ ಒಂದು ದೊಡ್ಡ ಕಲ್ಲು ಬಂಡೆ  ಅದನ್ನು ಶಿಲ್ಪಕಲೆಗಾರ ವರ್ಣರಂಜಿತವಾಗಿ ಕೆತ್ತಿದ್ದಾನೆ ಅನ್ಸುತ್ತೆ. ಮುಖ್ಯ ದ್ವಾರದ ಹತ್ತಿರ ಒಂದಿಷ್ಟು ಫೋಟೋಸ್ ತಗೊಂಡು ಮುಂದೆ ಸಾಗಿದ್ವಿ.
ಆವಾಗಲೇ ಸುಡುಬಿಸಿಲು ತನ್ನ ಪ್ರಭಾವ ಬೀರುತ್ತಿತ್ತು . ಆದರೆ ಚೈತನ್ಯರವರ ಮುಂದಾಳತ್ವ, ಕೊರಟಗೆರೆ ನಾಸ್ಟದ ಎನರ್ಜಿ ಮತ್ತು ನಮ್ಮಲ್ಲಿರೋ ಈ ಬೆಟ್ಟಾನ ಆಕ್ರಮಣ ಮಾಡಬೇಕೆಂಬ ಹುಮ್ಮಸ್ಸು ಆ ಬಿಸಿಲಿನ ಪ್ರಭಾವಕ್ಕೊಳಗಾಗದೆ ಮುಂದೆ ಹೊರಟಿತು ನಮ್ಮ ಟ್ರೆಕ್ಕಿಂಗ್  ಯುದ್ದ.
ಸ್ವಲ್ಪ  ಮುಂದೆ ಹೋದ್ರೆ ಅಲ್ಲೊಂದು ಕಲ್ಲು ಬಂಡೆ ತುದಿಗಾಲಲ್ಲಿ ನೆಲ ನೋಡುತ ನಿಂತಿತ್ತು... ನಾವು ಅದರ ಕೆಳಗೆ ನಿಂತು ಏನು ನಾವೇ ಅದನ್ನ ತಳ್ಳಿದ್ವಿ ಅನ್ನೋ ಹಾಗೆ ಪೋಸ್ ಕೊಟ್ವಿ... ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನ ಧೈತ್ಯ ಗುರು  ಹಾಗೆ ಹಿಡಿದು ನಿಲ್ಲಿಸೋಕೆ ಪ್ರಯತ್ನಿಸಿದ ಹಾಗೆ ಪೋಸ್ ಕೊಟ್ರು..:) ಇನ್ನು ಕೆಲವರು ಇನ್ನೆರಡು ಹೆಜ್ಜೆ ಮುಂದೆ ಹೋಗಿ ಘಟದ್ಗಜನ(ಘಟೋದ್ಗಜನ) ಹಾಗೆ ಕಿರು ಬೆರಳಲ್ಲಿ ಆ ಬೃಹದಾಕಾರದ ಬಂಡೆನ ಅಲುಗಾಡಿಸಿದ್ರು...
ಅಲ್ಲಿಂದ ಇನ್ನು ಸ್ವಲ್ಪ ಮುಂದೆ ಸಾಗಿದರೆ ಅಲ್ಲೊಂದು ಕಮಾನ್ ಇದೆ ( ಬಿಜಾಪುರದಲ್ಲಿ ಬಾರಾ ಕಮಾನ್ ಇರೋ ಹಾಗೆ). ಅದರ ಮೇಲೆ ಒಂದೊಂದು ಕಂಬದ ಮೇಲೆ ಒಬ್ಬೊಬ್ಬರು ನಿಂತು ಪೋಟೋಗೆ ಪೋಸ್ ಕೊಟ್ವಿ... 
ಅದೇನೋ ನಾ ಕಾಣೆ ಹರೀಶ್ ಮಾತ್ರ ಆ ಕಂಬಗಳ ಮೇಲೆ ಬರಲು ತುಂಬಾ ಹೆದರಿದ ಮತ್ತು ಆ ಕಂಬಗಳನ್ನು ನೋಡಿದ್ರೆ ಹರಿಶನ ಹಾವ ಭಾವದಲ್ಲಿ ತುಂಬಾ ಬದಲಾವಣೆಗಳು ಕಾಣಿಸಿದವು..!!!!!!!!!!... ನನಗನಿಸುತ್ತೆ ಹಿಂದಿನ ಜನ್ಮದಲ್ಲಿ ಅವ್ನು ಬಳ್ಳಾರಿ ರಾಜನಾಗಿದ್ದ ಮತ್ತು ಅವ್ನು ಈ ಮಧುಗಿರಿ ರಾಜನ ಮೇಲೆ ಆಕ್ರಮಣ ಮಾಡಿದಾಗ ಇದೆ ಜಾಗದಲ್ಲಿ ಏನೋ ಅವಾಂತರ ನಡೆದಿರಬೇಕು .. ( ಇದರ ಬಗ್ಗೆ ಸವಿಸ್ತಾರವಾಗಿ ಮತ್ತೊಮ್ಮೆ ಮಾತಾಡೋಣ..:).. )



ಅಲ್ಲಿಂದ ಮತ್ತೆ ಸ್ವಲ್ಪ ಮುಂದೆ ಹೋದ್ರೆ ವಾಚ್ ಟವರ್ ಸಿಗುತ್ತೆ.. ಅಲ್ಲಿಂದ ನೀವು ಮಧುಗಿರಿ ನಗರವನ್ನು ನೋಡಿದ್ರೆ ಮಧುಗಿರಿ ತುಂಬಾ ಚೆನ್ನಾಗಿ ಕಾಣಿಸುತ್ತೆ... ಅಲ್ಲಿ ಮತ್ತೆ ಫೋಟೋಸ್ ಗೆ ಪೋಸ್ ಕೊಟ್ಟು ವಾಚ್ ಟವರ್ ಇಂದ ಕೆಳಗೆ ಇಳಿದು ಬರಬೇಕು ಅಂದ್ರೆ ಅಲ್ಲೊಂದು ಕಂಬಿ ಇತ್ತು ಅದರ ಮೇಲೆ ಕುಳಿತು ನಾವು ಮೂರು ಮಂಗಗಳಂತೆ ಪೋಸ್ ಕೊಟ್ವಿ... ಆಮೇಲೆ ಕ್ಯಾಮೆರಾದಲ್ಲಿ ನೋಡಿದ್ರೆ ವಿಸ್ಮಯ ಕಾದಿತ್ತು ರೀ... ಅದು ಮೂರು ಮಂಗಗಳ ಕಥೆ ಅಲ್ಲ ಆಧುನಿಕ ಜಮಾನದ ನಾಲ್ಕನೆಯ ಮಂಗ ಕೂಡ ಹಿಂದಗಡೆಯಿಂದ ಪೋಸ್ ಕೊಟ್ಟಿತ್ತು...!!!!! ನಾಲ್ಕನೆಯ ಮಂಗ ಹೇಗೆ ಪೋಸ್ ಕೊಟ್ಟಿತ್ತು ಅಂತ ಹೇಳೋದು ಸ್ವಲ್ಪ ಕಷ್ಟ ಯಾಕಂದ್ರೆ ಸೆನ್ಸಾರ್ ಕಟ್...:) ಅದರ ಊಹೆಯನ್ನು ನಿಮಗೆ ಬಿಟ್ಟಿದಿನಿ.. ನೀವು ಊಹಿಸಿಕೊಳ್ಳಿ.....

ವಾಚ್ ಟವರ್

ಹಾಗೆ ನಗೆ ಚಟಾಕಿಗಳನ್ನು ಹಾರಿಸುತ ಮುಂದೆ ಸಾಗಿತು ನಮ್ಮ ಟ್ರೆಕ್ಕಿಂಗ್ ಆಕ್ರಮಣ...  ಅದು ಒಂದೇ ಕಲ್ಲಿನ ಬೆಟ್ಟವಾದ್ರಿಂದ ಹತ್ತಲು ಒಂದು ವಿಶೇಷವಾದ ಬೆಟ್ಟವೆನಿಸ್ತಿತ್ತು.. ನಮ್ಮ ಟ್ರೆಕ್ಕಿಂಗ್  ಸಾಗುತಿರಬೇಕಾದ್ರೆ ಒಂದು surprise ಬಂತು ನೋಡ್ರಿ ಅದೇ ಆ ದಾರಿ ಹೇಗಿತ್ತು ಅಂದ್ರೆ ವಾಲಿಕೊಂಡು ಸುಮಾರು 70 -80  ಡಿಗ್ರೀ  ಇಳಿಜಾರಿಗೆ ಅಭಿಮುಖವಾಗಿ ಬೆಟ್ಟ ಹತ್ತಬೇಕಿತ್ತು... ಅದುನ್ನ ನೆನಿಸ್ಕೊಂದ್ರೆ ನಂಗೆ ನಮ್ಮ ಕನ್ನಡ ಹೀರೋ ಅಂಬರೀಶ್ ಓಡೋ ನೆನಪು ಬರುತ್ತೆ... ನೀವೇನಾದ್ರು ಅಂಬರೀಶ್ ಮೂವಿ ನೋಡಿದಿದ್ರೆ ಈ ವಾಲಿಕೊಂಡು ನಡಿಯೋ ಸ್ಟೈಲ್ ತುಂಬಾ ಸಲೀಸಾಗಿ ನಿಭಾಯಿಸ್ತೀರ .. ನೀವೇನಾದ್ರು ಮಳೆಗಾಲ ಅಥವಾ ಮಂಜು ಬೀಳೋ ಸಮಯದಲ್ಲಿ ಇಲ್ಲಿಗೆ ಬಂದರೆ ಈ ಬೆಟ್ಟ ಹತ್ತೊಕಾಗೋದಿಲ್ಲ ಅನ್ಸುತ್ತೆ . 
ಆದರೆ  ಕಬ್ಬಿಣದ rail ಮಾಡಿರೋದ್ರಿಂದ ಆಸರೆಗೆ ಹಿಡಿಗುಕೊಂಡು ಬೆಟ್ಟ ಹತ್ತಬೇಕು... ಅಲ್ಲಿಂದ ಅರಿತು ಮರೆತು ಕೆಳಗೆ ನೋಡಿದರೆ, ಆ ಆಳ ನೋಡಿ ಜೀವ ಕೈಯಲ್ಲಿ ಬಂದಂಗಾಗುತ್ತೆ.. 
ಇದರ ಮದ್ಯ ನಮ್ಮ ಮೇಲೆ ಸೂರ್ಯನ ಉರಿ ಬಿಸಿಲಿನ ಕಿರಣಗಳ ಆರ್ಭಟ ಜಾಸ್ತಿ ಆಗಿತ್ತು.. ಆದರ ಅದರ ಪರಿಣಾಮ ನಮಗೆ ಅಷ್ಟೊಂದು ಆಗಲಿಲ್ಲ ಯಾಕೆ ಗೊತ್ತೇ?  
ವಾಯು ಪುತ್ರ ನಮ್ಮ ಸಪೋರ್ಟ್ ಗೆ ನಿಂತು ತಂಪಾದ ಗಾಳಿ ಬೀಸುತಿದ್ದ, ಆ ತಂಗಾಳಿಯಲಿ ನಾವು ಬೆಂದಿರೋದನ್ನ  ನೋಡಿ ಆ ಸೂರ್ಯದೇವನು ಕೂಡ ಮನಸೋತು ಹೋಗಿದ್ದನೇನೋ ಅನ್ಸುತ್ತೆ...:)

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ
ಕಹಾನಿ ಮೇ ಟ್ವಿಸ್ಟ್:-
ಅಲ್ಲಿಂದ ಸ್ವಲ್ಪ ಮುಂದೆ ಹೋದ್ರೆ ಹೋ ಕೊನೆಗೂ ಕಷ್ಟಪಟ್ಟು ಬೆಟ್ಟ ಹತ್ತಿದ್ವಿ ಅಂತ ಎಲ್ಲರೂ ಕುಣಿದಾಡಲು ಶುರು ಮಾಡಿದ್ರು... ಅಲ್ಲೇ ಟ್ವಿಸ್ಟ್ ಬಂತು ನೋಡ್ರಿ actually  ಅದು ಬೆಟ್ಟದ ತುದಿ ಆಗಿರಲಿಲ್ಲ.. ಆದರ ಅದು ನೋಡೋದಕ್ಕೆ ಬೆಟ್ಟದ ತುದಿಯಾಗಿದೆ ಅನ್ಸುತ್ತೆ... ಚೈತನ್ಯ ಹೇಳಿದ ಇದು ಬರಿ ಅರ್ಧ ಆಕ್ರಮಿಸಿದ್ದೇವೆ... ಇನ್ನೂ ಅರ್ಧ ಕ್ರಮಿಸಬೇಕು... ಎಲ್ಲರೂ ಒಂದೇ ಹೊಡೆತಕ್ಕೆ  silent.... 
ಇಷ್ಟೊಂದು ಹತ್ತಿದ್ದೇವೆ ಅದೆಷ್ಟು ಇದೆ ನೋಡಿಯೇ ಬಿಡೋಣ ಅಂತ ಸ್ವಲ್ಪ snaps  ತಗೊಂಡು ಮತ್ತೆ ಬೆಟ್ಟ ಹತ್ತಲು ಶುರು ಮಾಡಿದ್ವಿ...  
ಬೆಟ್ಟದ ಮೇಲೆ ಹೋಗಬೇಕು ಅಂದರೆ ನೀವು 11 ಗೋಡೆಗಳನ್ನ ದಾಟಬೇಕು..  ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಇನ್ನೊಂದು surprise  ಕಾದಿತ್ತು ಅದೇನು ಗೊತ್ತಾ? 
ಅದೇನಂದರೆ   ಅದೊಂದು ಇಳಿಜಾರಿನ ಪ್ರದೇಶ ಅಲ್ಲಿ ಹತ್ತಬೇಕು ಅಂದರೆ ಅಲ್ಲಿ ಮೆಟ್ಟಿಲುಗಳಿಲ್ಲ ಮತ್ತು support  ಹಿಡಿಯೋದಕ್ಕೆ ಏನೂ ಇಲ್ಲ... ಅಪ್ಪಿ ತಪ್ಪಿ ಕಾಲು ಜಾರಿದರೆ or balance  ತಪ್ಪಿದರೆ ನೇರವಾಗಿ ಬೇರೆ ಲೋಕಕ್ಕೆ ಪಯಣ......!!!!!
ಈ ಬೆಟ್ಟ ಹತ್ತಲು ಹರಿಶನ್ನ ಸ್ಮರಿಸಲೇ ಬೇಕು ಯಾಕೆ ಗೊತ್ತ.. ಅವನು ಹೊಸ ಟ್ರೆಕ್ಕಿಂಗ್ ವಿಧಾನವನ್ನ ಕಂಡುಹಿಡಿದಿದ್ದ .. ಅದೇನಂದರೆ ಆಮೆ ಥರ ಹೊಟ್ಟೆ ಸವೆದುಕೊಂಡು ಬೆಟ್ಟ ಹತ್ತೋದು...:) 

Balance ಮಿಸ್ ಆದ್ರೆ ನೇರವಾಗಿ ಬೇರೆ ಲೋಕಕ್ಕೆ ಪಯಣ

Balance ಮಿಸ್ ಆದ್ರೆ ನೇರವಾಗಿ ಬೇರೆ ಲೋಕಕ್ಕೆ ಪಯಣ

ಅಂತು ಇಂತೂ ಹರಸಾಹಸ ಮಾಡಿ ಹನ್ನೊಂದು ಗೋಡೆಗಳನ್ನ ಆಕ್ರಮಣ ಮಾಡಿ ನಮ್ಮ ಹತೋಟಿಗೆ ತಗೆದುಕೊಂಡಿದ್ವಿ...:)
ಕೊನೆಗೆ ಬೆಟ್ಟ ಹತ್ತಿರೋ ಖುಷಿಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿ ಜಯದ ಜಯಕಾರಗಳನ್ನು ಹೇಳಿದರು.. ಆ ಗೆಲುವಿನ ಸಂತೋಷಕ್ಕೆ ನಮಗೆ ಆರತಿ ಮಾಡೋದೊಂದು ಬಾಕಿ ಇತ್ತು ನೋಡ್ರಿ...

ಯಾಹೂ ಕೊನೆಗೂ ನಾವೇ ಗೆದ್ವಿ 


ಬೆಟ್ಟದ ಮೇಲೆ ಗೋಪಾಲಸ್ವಾಮಿ ಗುಡಿ ಇದೆ... ಆದರೆ ಅಲ್ಲಿ ಯಾರು ಕಾಳಜಿ ವಹಿಸದ್ದರಿಂದ ಆ ಗುಡಿ ಹಾಳುಬಿದ್ದಿದೆ ... ಅಲ್ಲೇ ಒಂದು ಕಲ್ಲುಮಂಟಪವಿದೆ  ಅಲ್ಲಿ ಕುಳಿತು  ನಿಂಬೆ ಹಣ್ಣಿನ ಅಳತೆಯಷ್ಟಿರೋ ಕಿತ್ತಳೆ ಹಣ್ಣುಗಳನ್ನ  ಮತ್ತು biscuits .. cakes  ತಿಂದ್ವಿ... 
ಅಲ್ಲೇ ಸ್ವಲ್ಪ ವಿಶ್ರಾಂತಿ ತಗೊಂಡು.. ಬೆಟ್ಟದ ಮೇಲೆ full  ಸುತ್ತಾಡಿ ..ಫೋಟೋಸ್ ಗೆ ಫೋಸ್ ಕೊಟ್ಟು.. 
ಸುಮಾರು ಮದ್ಯಾನ 12 ಕ್ಕೆ ಕೆಳಗೆ ಇಳಿಯೋದಕ್ಕೆ ಶುರುಮಾಡಿ 80 ನಿಮಿಷದಲ್ಲಿ ಕೆಳಗೆ ಬಂದ್ವಿ...

ಹಂಗೆ ಒಂದು ಪೋಸ್
 ಅಲ್ಲಿಂದ ಹೊರಟು ಕೊರಟಗೆರೆ ಗೆ ಬಂದು ಒಂದು ಅಂಗಡಿಯಲ್ಲಿ ಸ್ವೀಟ್ ಲೈಮ್ ಸೋಡಾ, ಮಸಾಲಾ ಸೋಡಾ, ಕೂಲ್ಡ್ರಿಂಕ್ಸ್  ಕುಡಿದು ಸ್ವಲ್ಪ ವಿಶ್ರಮಿಸಿ ಬೆಂಗಳೂರಿಗೆ ಸುಮಾರು ಸಾಯಂಕಾಲ 4ಕ್ಕೆ ಬಂದು ತಲುಪಿದ್ವಿ..  
ಆಯಾಸವಾದರೂ ಈ ಟ್ರೆಕ್ಕಿಂಗ್  ಯಶಶ್ವಿಯಾದ್ದರಿಂದ ಎಲ್ಲರ ಮುಖದಲ್ಲಿ ಆ ಆಯಾಸ ಕಾಣಿಸಲಿಲ್ಲ... 
ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿ.. ತಮ್ಮ ತಮ್ಮ ಮನೆಗೆ ಮರಳಿದರು... 

ಕೃತಜ್ಞತೆಗಳು:-
ಚೈತನ್ಯಕುಮಾರ್  ಎ   ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ  ಗೆಳೆಯರಾದ (ಸಹ ಚಾರಣಿಗರಾದ  ಚೈತನ್ಯಕುಮಾರ್, ಹರೀಶ್, ಸಂತೋಷ್, ಆಧಾರ್, ಗೌತಮ್ ಮತ್ತು ಚನ್ನ ... 



....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....





5 comments:

Unknown said...

Nice writeup.Enjoyed it magaa..:)

Share it in fb..

Channabasappa Nad said...

Thanks Goutham..
sure i'l do tat...

Channabasappa Nad said...
This comment has been removed by the author.
Channabasappa Nad said...

Thanks to Gautham and his friend for helping in improving my ಅಕ್ಷರಮಾಲೆ.... :)

saakara5 said...

ಚಾರಣದ ಸಂಪೂಣ೯ ಮಾಹಿತಿಯನ್ನು ಒಳಗೊಂಡಿದೆ. ಧನ್ಯವಾದಗಳು... ನನ್ನ ಗೆಳೆಯರೊಂದಿಗೆ ನಾನು ಮಧುಗಿರಿ ಬೆಟ್ಟ ಚಾರಣ ಮಾಡುವ ಆಸೆ ಹುಟ್ಟಿಕೊಂಡಿದೆ. ಇನ್ನು 3-4 ದಿನಗಳಲ್ಲಿ ಮಧುಗಿರಿ ಬೆಟ್ಟ ಚಾರಣ ಮಾಡುತ್ತೇನೆ...
- ರುದ್ರಗೌಡ ಮುರಾಳ