Thursday, 25 April 2013

ಕಾಮತ್ ಖಾನ ಖಜಾನಾ................... Heaven for Foodies (One Day Trip to Kamat Lokaruchi, Janapada Loka and Kanva Reservior)... 2nd October 2011


ಪ್ಲಾನ್ ಕೆ ಮುತಾಬಿಕ್ ಚಂದ್ರಾ ಬಡಾವಣೆಯಲ್ಲಿರುವ ಅಮೀನ್ ರೂಮಿಂದ ಬೆಳಿಗ್ಗೆ 6:30ಕ್ಕೆ  ಎಲ್ಲರೂ ಬೆಂಗಳೂರು ವಿಶ್ವವಿದ್ಯಾಲಯದ ಮಾರ್ಗವಾಗಿ ಹೊರೆಟೆವು...  ವಿಶ್ವವಿದ್ಯಾಲಯದಲ್ಲಿ  ಚಿಕ್ಕ ಕಾಡು ಕಾಣಿಸಿತು.. ಅದೇನೋ ರೀ ಪಾ ನಮ್ ಬೆಂಗಳೂರಿನಲ್ಲಿರೋ ಜನರಿಗೆ ಸ್ವಲ್ಪ ಹಸಿರು ಅಥವ ಕಾಡು ಕಾಣಿಸಿದರೆ ಜೀವನದಲ್ಲಿ ಏನೋ  ಪಡೆದಂತೆ ಮನಸ್ಸಿಗೆ ಆನಂದ ಮತ್ತು ಹುಮ್ಮಸ್ಸು ಪಾಪ ಅವರೇನು ಮಾಡ್ತಾರೆ ಹೇಳ್ರಿ ಮುಂಜಾನೆದ್ದು ಸಾಯಂಕಾಲದವರೆಗೆ ಆ ಆಫೀಸು ಆ ಮಲಿನವಾಗಿರೋ ಗಾಳಿ ಆ  ಪಕ್ಕದಮನೆಲಿ ಇದ್ದರು ಒಬ್ಬರಿಗೊಬ್ಬರು ಯಾರು ಅಂತಾನೆ ಗೊತಿಲ್ದೆ ಇರೋ ಆ ಜನ,  ಜಂಗುಳಿಯಿಂದ ಕೂಡಿರೋ  ಜೀವನ, ಇದೆಲ್ಲದರ ನಡುವೆ ಅತ್ತ ನಮ್ಮೂರಿಗೂ ಹೊಗೂದಕಾಗದೆ ಇತ್ತ ಬೆಂಗಳೂರು ಬಿಡೋಕಾಗದೆ ಚಡಪಡಿಸುತ್ತಿರೋ ಯಾರೂ ಕರುಣೆ ತೋರಿಸದ ಬಡಪಾಯಿಗಳು .....  ಬೆಳಗಿನಜಾವ ಚಿಕ್ಕ ಕಾಡಾದರೂ ಚುಮು ಚುಮು ಚಳಿಯಲಿ ಸ್ವಲ್ಪ ಮಂಜು ಕವಿದ ವಾತಾವರಣ ಇರೋದ್ರಿಂದ ಬಾಳ ಚಂದ ಕಾಣಿಸ್ತಿತ್ತು.. ಹಾಗೆ ಒಂದೆರಡು ಗ್ರೂಪ್ ಫೋಟೋಸ್ ತಗೊಂಡು ಮತ್ತೆ ಕೆಂಗೇರಿ ಮಾರ್ಗವಾಗಿ ಕಾಮತ್ ಲೋಕರುಚಿ ಕಡೆಗೆ ಸಾಗಿತು ನಮ್ಮ ಬೈಕ್ ಸವಾರಿ..... 

ಬೆಂಗಳೂರಿ ವಿಶ್ವವಿದ್ಯಾಲಯದ ಕಾಡಲ್ಲಿ 

ಬೆಂಗಳೂರಿ ವಿಶ್ವವಿದ್ಯಾಲಯದ ಕಾಡಲ್ಲಿ 


ಬೆಂಗಳೂರು ಮೈಸೂರು ಮಾರ್ಗಮದ್ಯ (ಸ್ವಲ್ಪ ಗಮನಿಸಿ ಇವರು Woodland brand  ambassadors ಅನ್ಕೊಂಡ್ರ ಹೆಂಗೆ)ನಾನು ಗಿರೀಶ್ ಬೈಕ್ ಮೇಲೆ ಕುಳಿತಿದ್ದೆ.. ಕೆಂಗೇರಿ ದಾಟಿದ್ದೆ ತಡ ಗಿರೀಶ್ ಬೈಕ್ ಸ್ಕಿಡ್ಡಿಂಗ್ ಶುರು ಮಾಡಿದ ನೋಡ್ರಿ ನಂಗೆ ಗೊತಿಲ್ದೆ ರಪ್ಪ್ ಅಂತ ಯಾವದೋ ಲೋಕಕ್ಕೆ ಹೋಗಿ ಬಂದಂಗೆ ಭಾಸವಾಯ್ತು.. ಬೈಕ್ ರೈಡ್ ಮಾಡೋರಿಗೆ  ಅದು ತುಂಬಾ ಮಾಮೂಲು ಅನ್ಸುತ್ತೆ  ರೀ ಆದ್ರೆ ಹಿಂದಗಡೆ ಕುಳಿತವರಿಗೆ  ಗೊತ್ತು ಅದರ ಭಯ... ಹಂಗೆ ಹಿಂಗೆ ಕಾಮತ್  ಲೋಕರುಚಿಗೆ ಬೆಳಿಗ್ಗೆ 7:15 ಕ್ಕೆ  ಬಂದು ಮುಟ್ಟಿದೆವು.. 
ಹಾ ಕಾಮತ್ ಬಗ್ಗೆ ಹೇಳೋದೇ ಮರ್ತಿದ್ದೆ, ಇದು ಬುಫ್ಫೆಟ್ ಸಿಸ್ಟಮ್ ಬ್ರೇಕ್ಫಾಸ್ಟ್ ಗೆ (buffet system breakfast) ತುಂಬಾ ಪ್ರಸಿದ್ದಿ ಪಡೆದಿರೋ ಹೋಟೆಲ್.. ರೂ 100/ ಕೊಟ್ಟರೆ ಹೊಟ್ಟೆ ತುಂಬಾ ವಿದವಿಧವಾದ ತಿಂಡಿಗಳನ್ನು ತಿನ್ನಬಹುದು.. ಅದರಲ್ಲಿ ಕೆಲವೊಂದು ಹೆಸರಿಸಬೇಕಂದ್ರೆ , ಬಾಳೆ ಎಲೆಯಲ್ಲಿ ಸುತ್ತಿ ಮಾಡಿರೋ ಚಿಕ್ಕ ಚಿಕ್ಕ ಇಡ್ಲಿ, ಸಣ್ಣ ಸಣ್ಣ ಸೆಟ್ ಮತ್ತು  ಮಸಾಲೆ ದೋಸೆ, ಉಪ್ಪಿಟ್ಟ್, ಸಿರಾ, ಜಿಲೇಬಿ, ಹಣ್ಣಿನ ರಸ(fruit  juice)  ಇತ್ಯಾದಿ ಇತ್ಯಾದಿ..  
ಮತ್ತೊಂದು ವಿಷಯ ಈ ಬುಫ್ಫೆಟ್ ಸಿಸ್ಟಮ್ ಬ್ರೇಕ್ಫಾಸ್ಟ್ ಸಿಗೋದು ಬೆಳಿಗ್ಗೆ 7 ರಿಂದ  ಬೆಳಿಗ್ಗೆ 10 ರವರೆಗೆ ಮಾತ್ರ..:)
ಮಸ್ತ್ ನಾಸ್ಟ ಮಾಡಿ ಪಕ್ಕದಲ್ಲೇ ಇರೋ ಜನಪದ ಲೋಕ ವಸ್ತು ಸಂಗ್ರಾಲಯಕ್ಕೆ ಭೇಟಿ ಕೊಟ್ವಿ.. 

ಕಾಮತ್ ಲೋಕರುಚಿ

ಖಾನ ಬಜಾನ

ಖಾನ ಬಜಾನ

ಖಾನ ಬಜಾನ

ಖಾನ ಬಜಾನ

ಖಾನ ಬಜಾನ

ಜನಪದ ಲೋಕ:-

ಜನಪದ ಲೋಕ ಅಂದ್ರೆ ಹೆಸರು ಹೇಳೂ ಹಾಗೆ  ಇದೊಂದು  ಪ್ರಾಚೀನ ಕಾಲದ ಜನರ ಉಡುಗೆ ತೊಡುಗೆ ಮತ್ತು ಜೀವನ ಶೈಲಿಯನ್ನು ಬಿಂಬಿಸೋ ಒಂದು ಚಿಕ್ಕದಾದರು ಚೊಕ್ಕ ಮತ್ತು ಮನಸೆಳೆಯೋ  ವಸ್ತು ಸಂಗ್ರಾಲಯ... 

ವಸ್ತು ಸಂಗ್ರಾಲಯವನ್ನು ನೋಡುತಾ ಹಾಗೆ ಒಂದಿಸ್ಟು  ಫೋಟೊಗಳನ್ನ ತಗೆದುಕೊಂಡು.. ಅದೇ ವಸ್ತು ಸಂಗ್ರಾಲಯದಲ್ಲಿ ಒಂದು ಚಿಕ್ಕ ಕೆರೆ ಇದೆ ಅಲ್ಲಿ ಬೋಟಿಂಗ್ ವ್ಯವಸ್ತೆ ಕೂಡ ಇದೆ, ಬೋಟಿಂಗ್ ಚಾರ್ಜ್ ಒಬ್ಬರಿಗೆ ರೂ 5/, ಅದು ಬರಿ ಬೆಂಗಳೂರಿನ ಒಂದು ಹಾಫ್ ಕಾಫಿ/ಟೀ ಬೆಲೆ ಅಂದ್ರೆ ಒಬ್ಬರಿಗೆ ರೂ 5/ ಮಾತ್ರ...:)
ಎಲ್ಲರೂ ನಾ ಮುಂದ ತಾ ಮುಂದೆ ಅಂತ ಬೋಟಿಂಗ್ ಮಾಡಿದ್ದೆ ಮಾಡಿದ್ದು.. ಅಲ್ಲೇ ಗಾರ್ಡೆನ್ ಅಲ್ಲಿ ಸುತ್ತಾಡಿ ಕೆರೆ ಪಕ್ಕ ಮತ್ತೆ ಫೋಟೋಸ್ ತಕ್ಕೊಂಡು.. ಕಣ್ವ ಅಣೆಕಟ್ಟಿಗೆ ( Kanva Dam) ಹೊರಟೆವು... 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 


ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ ಜನಪದ ಲೋಕ ಜನಪದ ಲೋಕ ಜನಪದ ಲೋಕ 

ಜನಪದ ಲೋಕ 


ಜನಪದ ಲೋಕ 


ಕಣ್ವ ಆಣೆಕಟ್ಟು:- 
ರಾಮನಗರದಿಂದ ಸ್ವಲ್ಪ ದೂರದಲ್ಲಿರೋ ಕಾವೇರಿ ನದಿಗೆ ಕಟ್ಟಿರೋ ಚಿಕ್ಕ ಆಣೆಕಟ್ಟು.. ಈ ಭಾಗದಲ್ಲಿರೋ ಭೂಮಿಯನ್ನ ನೀರಾವರಿಗೆ ಪರಿವರ್ತಿಸಲು ಕಟ್ಟಿರೋ ಆಣೆಕಟ್ಟು.. ನಾ  ಇದರ ಬಗ್ಗೆ ಹೇಳಾಕ್ ಹೊಗಾಂಗಿಲ್ಲ.. ಗೂಗಲ್ ಅಲ್ಲಿ ತುಂಬಾ ಚೆನ್ನಗಿನೆ ವಿವರಿಸಿದ್ದಾರೆ... 
ಸುಮಾರು ಮದ್ಯಾನ 12 ಕ್ಕೆ ನಾವೆಲ್ಲರೂ ಆಣೆಕಟ್ಟು ತಲುಪಿದ್ವಿ... 
ಡ್ಯಾಮ್ ನೋಡಿ ಅಲ್ಲಿ ಹಿನ್ನೀರಿನಲ್ಲಿ ಹೋಗಿ ಸ್ನಾನ/ಈಜಾಡೋಕೆ ರೆಡಿ ಆದ್ವಿ ನೋಡ್ರಿ.. ಹಂಗೆ ಅಲ್ಲಿ ಯಾವ್  ಯಾವ್ ಆಡಿದ್ವಿ ಅಂತ ಹೇಳಬಾರದು. ನೀರು ಕಡಿಮೆ ಇರೋದ್ರಿಂದ ಈಜು ಬರದೆ ಇರೋರು ಕೂಡ ಸ್ನಾನ ಮಾಡಿದ್ರು. ಒಟ್ಟಿನಲ್ಲಿ ಗೆಳೆಯರೆಲ್ಲರೂ ಮಸ್ತ್ ಮಜಾ ಮಾಡಿದ್ವಿ..:)


ಕಣ್ವ ಆಣೆಕಟ್ಟು

ಕಣ್ವ ಆಣೆಕಟ್ಟು

ಅಲ್ಲಿಂದ ಮದ್ಯಾನ 2:30 ಸುಮಾರಿಗೆ ಬೆಂಗಳೂರಿನ ಕಡೆಗೆ ಸಾಗಿತು ನಮ್ಮ ಬೈಕ್ ಪ್ರಯಾಣ...ದಾರಿಯಲ್ಲಿ ಬರೋವಾಗ ಮರ್ಗಮದ್ಯ ಸುಂದರವಾದ ಪ್ರಕೃತಿಯ ಸೌಂದರ್ಯ ನಮ್ಮನ್ನು ಕೈ ಬೀಸಿ ಈ ಪ್ರಕೃತಿಯ ಸೌಂದರ್ಯವನ್ನು ಸವಿದು ಫೋಟೋ ತಗೆದುಕೊಂಡು ಹೊಗ್ರೋ  ಅಂತ ಕರೀತಿತ್ತು . ಇಸ್ಟೊಂದು ಆಹ್ವಾನವಿತ್ತಾಗ ನಾವು ಬಿಡ್ತೀವಾ.. ಅಲ್ಲೇ ಮತ್ತೆ ಒಂದಿಸ್ಟು ಫೋಟೋಸ್ ಗೆ ಫೋಸ್ ಕೊಟ್ಟು ಒಬ್ಬರಿಗೊಬ್ಬರು ರೇಗಿಸುತ್ತಾ ಬೆಂಗಳೂರಿನ ಕೆಡೆಗೆ  ಹೊರೆಟೆವು... 


 ರಾಮನಗರ ಹತ್ತಿರ ಬಂದಾಗ ಮಳೆ ಬರೋದಕ್ಕೆ ಶುರುಮಾಡಿತು.. ಅಲ್ಲೇ ಸ್ವಲ್ಪ ಚಾವಣಿ ಕೆಳಗೆ ನಿಂತು ಮಳೆ ಕಡಿಮೆಯಾದ ಮೇಲೆ ಹೊರಟು ಸಾಯಂಕಾಲ 5:00 ಕ್ಕೆ ಬೆಂಗಳೂರಿಗೆ ಸೇರಿದ್ವಿ... 
ಮೈಸೂರು ರಸ್ತೆಯಲ್ಲಿರೋ ಗೋಪಾಲನ್ ಆರ್ಕೆಡ್ ಗೆ(Gopalan Arcade Cinemas) ಹೋಗಿ KFC ಅಲ್ಲಿ ಸಾಯಂಕಾಲದ ಉಪಹಾರ ಸೇವಿಸಿ... ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿ ಅಲ್ಲಿಂದ ಮತ್ತೆ ಅದೇ ಬೆಂಗಳೂರಿನ ಅಲೆಮಾರಿಯಂತ ಜೀವನಕ್ಕೆ ಮರಳಿದರು.... 


KFC

KFC

ಕೃತಜ್ಞತೆಗಳು:- 
ಈ ಒಂದು ದಿನದ ಪ್ರವಾಸದಲ್ಲಿ ಬಾಗವಹಿಸಿದ ,
ಅಣ್ಣರಾವ್ , ಗಿರೀಶ್, ಅಮೀನ್, ಶ್ರೀಶೈಲ್, ಕಿರಣ್, ಮಧು, ಚವಾಣ್ ಮತ್ತು ಚನ್ನ.... 

ಮಾರ್ಗ ಸೂಚಿ:- 
ಬೆಂಗಳೂರಿಂದ ಸುಮಾರು 40Km...  
ಬೆಂಗಳೂರಿಂದ ಮೈಸೂರು ಮಾರ್ಗ ಮಧ್ಯದಲ್ಲಿದೆ.. 
ರಾಮನಗರದಿಂದ ಸುಮಾರು 3km  ದೂರ ಕ್ರಮಿಸಿದರೆ ಬಲಗಡೆಗೆ  ಸಿಗುತ್ತೆ.... 
ಸಾರಿಗೆ ವ್ಯವಸ್ತೆ:- 
ರಾಮನಗರದವರೆಗೆ ಸರಕಾರಿ ಬಸ್ಸಲ್ಲಿ ಹೋಗಿ ಅಲ್ಲಿಂದ ಆಟೋದಲ್ಲಿ ಹೋಗಬಹುದು ಅಥವಾ ನಿಮ್ಮ ಸ್ವಂತ ವಾಹನದಲ್ಲಿ ಹೋಗಬಹುದು...
....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....No comments: