Thursday 20 June 2013

ಬಾಣಂತಿಮಾರಿ ಬೆಟ್ಟಕ್ಕೆ ಚಾರಣ - (Trek To Bananthimari Betta - 16th June 2013)




ಬಾಣಂತಿಮಾರಿ  ಬೆಟ್ಟ:- 
ಬಾಣಂತಿ ಮಾರಿ ಬೆಟ್ಟವಿರೋದು ಕನಕಪುರದಿಂದ ರಾಮನಗರ ಕಡೆ ಹೋಗುವ ಮರ್ಗಮದ್ಯ ಸುಮಾರು 3 ಕಿ.ಮೀ ದೂರದಲ್ಲಿ... ಜೋಡಿ ಬೆಟ್ಟಗಳ ಸುಂದರ ತಾಣವಾಗಿರೋ ಇದು ಒಂದು ದಿನದ ಟ್ರೆಕ್ಕಿಂಗ್ ಗೆ ಮತ್ತೊಂದು ಒಳ್ಳೆಯ ಸ್ಥಳ. 

ಪ್ರವಾಸ ಕಥನ/ಟ್ರೆಕ್ಕಿಂಗ್  ವಿವರ:-

ಬೆಳಿಗ್ಗೆ ಅಂದುಕೊಂಡಿರೋದಕ್ಕಿಂತ 30 ನಿಮಿಷಗಳು ತಡವಾಗಿ ಅಂದರೆ ಬೆಳಿಗ್ಗೆ ಸುಮಾರು 8:15 ಕ್ಕೆ ನಮ್ಮ ಪಯಣ ಬೆಂಗಳೂರಿನ ಬನಶಂಕರಿ ಬಸ್ಸು ನಿಲ್ದಾಣದಿಂದ ಶುರುವಾಯಿತು.. 
ಅಲ್ಲಿಂದ ಎಲ್ಲರೂ TT ಯಲ್ಲಿ ಹೊರೆಟು  ಸುಮಾರು 9 ಕ್ಕೆ ಕನಕಪುರದಲ್ಲಿರುವ ಶ್ರೀನಿವಾಸ ಸಾಗರ ಹೋಟೆಲು ತಲುಪಿದೆವು.. ಅಲ್ಲಿ ಬೆಳಗಿನ ಉಪಹಾರಕ್ಕೆ ತಟ್ಟೆ ಇಡ್ಲಿ ಜೊತೆ ವಡೆ ಮತ್ತು ಹಂಗೆ ಸ್ವಲ್ಪ ಕಾಫಿ ಕುಡಿದು  ಮಧ್ಯಾನ  ಊಟಕೆಂದು ಪಲಾವ್ ಪಾರ್ಸೆಲ್ ತಗೆದುಕೊಂಡು ಮುಂದೆ ಸಾಗಿದೆವು.. ಅಲ್ಲಿಂದ ಮುಂದೆ ಹೋಗಿ ಬೆಳಿಗ್ಗೆ 9:45 ಕ್ಕೆ ಇರುಳಿಗರ ಕಾಲೋನಿ ತಲುಪಿದೆವು.. 


ಇದು ನಾಷ್ಟಾ ಸಮಯ



ಅಲ್ಲಿ ನೋಡಿದರೆ ಒಟ್ಟಿಗೆ ನಿಂತಿರುವ ಜೋಡಿ ಬೆಟ್ಟಗಳು ಕಾಣಿಸುತ್ತಿವೆ ... ಇಲ್ಲೇ ಶುರುವಾಯಿತು ನೋಡ್ರಿ ನಮ್ಮ tension... ಯಾವ್ ಬೆಟ್ಟ ಹತ್ತಬೇಕು ಏನ್ ಸುದ್ದಿ ಅಂತ.. ಒಬ್ಬನು ಹೇಳೋನು ಆ ಬೆಟ್ಟ ಹತ್ತಬೇಕು ಮತ್ತೆ ಇನ್ನೊಬ್ಬ ಹೇಳೋನು ಅದಲ್ಲೋ ಮಾರಾಯ ಈ ಬೆಟ್ಟ ಹತ್ತಬೇಕು .. ಥೋ ಹೋಗವನೌನ ಯಾವ್ ಬೆಟ್ಟ ಹತ್ತಬೇಕು ಅಂತ ನಮ್ಗಾ ತಿಳಿವಲ್ದಲ್ಲೋ.. ಹಿಂಗಾದ್ರ ಕೆಲಸ ಕೆಡ್ತಾದ.. ಎರಡೂ ಬೆಟ್ಟಗಳನ್ನು ಹತ್ತೋಣ ನಡಿರೋ ಯಾಕ್ ಅಷ್ಟು ಚಿಂತಿ ಮಾಡ್ತೀರಿ ಅಂತ ಒಂದಿಷ್ಟು ಜನ ಹೇಳಾಕತ್ರು.. ಹೇಳಾದು ಬಾಳ ಈಜಿ ರೀ.. ಆದರೆ ಆ ಎರಡು ಗುಡ್ಡ ಒಂದೇ ದಿನ ಹತ್ತೋದು ಅಂದ್ರ ಸಾಮಾನ್ಯ ಅನ್ಕೊಂಡ್ರೆನು?
ಟ್ರೆಕ್ಕಿಂಗ್ ಮಾಡಿ ರೂಡಿ ಇರೋರಿಗೆ ಇದೊಂದು ಅಡಕೆ ಹೋಳು(ಚೂರು) ತಿಂದಷ್ಟೇ ಸುಲಭ ಆದರೆ ನಮ್ಮಂತ ಯಾವಾಗಲೋ ಒಂದು ಸಾರಿ ಕನಸು ಬಿದ್ದಾಗ, ಇಲ್ಲವೇ ದೇವರು ಗುಡಿಯೊಳಗ ಇಲ್ದಾಗ ಟ್ರೆಕ್ಕಿಂಗ್ ಮಾಡೋರಿಗೆ ಒಂದೇ ದಿನ ಎರಡೆರಡು ಬೆಟ್ಟ ಹತ್ತು ಅಂದ್ರ ಹ್ಯಾಂಗ್ರೀ? 
ಹಿಂಗಾ ಅದು ಇದು ಅಂತ ಮಾತ್ಯಾಡ್ಕೊಂತ ಕುಳಿತ್ರ ಯಾವ್ದು ಕೆಲ್ಸಾ ಆಗಾಂಗಿಲ್ಲ ..  ಮೊದಲು ಒಂದು ಗುಡ್ಡ ಹತ್ತೋಣ ಆಮ್ಯಾಲ ಅದೇ ಎನರ್ಜಿ, ಅದೇ ಹುಮ್ಮಸ್ಸು ಇದ್ಡರೆ ಇನ್ನೊಂದು ಹತ್ತೋಣ ಅನ್ನೋದ್ರೊಳಗೆ ಸಮಯ 15 ನಿಮಿಷ ಕೆಳೆಯಿತು, ಹೋಗ್ಲಿ ಬಿಡ್ರೋ ಇಲ್ಲೇ ಊರಲ್ಲಿ ಯಾರಾದ್ರು ಹುಡುಗರು ದಾರಿ ತೋರ್ಸಾಕ ಬರ್ತಾರೆನು ನೋಡಿ ಅವ್ರಿಗೆ ಸ್ವಲ್ಪ ರೋಖ(ಹಣ) ಕೊಟ್ರಾತು ಅಂತ ಫೈನಲ್ಲಾಗಿ ಗೈಡ್ ತಗೊಳ್ಳೋದು ಅಂತ ಡಿಸೈಡ್ ಮಾಡಿ 
ಒಂದು ಹುಡುಗನಿಗೆ ಹಂಗೆ ಹಿಂಗೆ ಮಾಡಿ ಒಪ್ಪಿಸಿದೆವು.. ಹ್ಮ್ ಅಂತು ಇಂತೂ ಒಂದು ಕೆಲಸ ಆತು ನೋಡು .. ಇನ್ನೆನಿದ್ರು ಬೆಟ್ಟ ಹತ್ತೋ ಕೆಲಸ ಅಷ್ಟೇ... 
ನಾವು ಬಂದಿರೋ ಮಿನಿ ಬಸ್ಸಿನ ಮುಂದೆ ಕುಳಿತು ಒಂದು ಗ್ರೂಪ್ ಫೋಟೋದೊಂದಿಗೆ ಬೆಳಿಗ್ಗೆ 9:50 ಕ್ಕೆ ಶುರುವಾಯಿತು ನಮ್ಮ ಈ ಬಾಣಂತಿ ಮಾರಿ ಬೆಟ್ಟದ ಚಾರಣ... 


@ ಬಾಣಂತಿಮಾರಿ ಬೆಟ್ಟ



ಜೋಡಿ ಬೆಟ್ಟಗಳಲ್ಲಿ  ಒಂದನ್ನು ಈ ದಿನ ಹತ್ತೋಣ ಮತ್ತೊಂದು ದಿನ ಬಂದು ಇನ್ನೊಂದು ಬೆಟ್ಟವನ್ನು ಹತ್ತೋಣ ಅಂದುಕೊಳ್ಳುತ ಸಾಗಿದೆವು
 ಸ್ವಲ್ಪ ಅಂದರೆ ಸುಮಾರು  1km ದೂರ ಕ್ರಮಿಸಿದಾಗ ಬೆಟ್ಟದ ನಿಜವಾದ ಟ್ರೆಕ್ಕಿಂಗ್ ಜೀವ ಪಡೆಯಿತು.... ಹತ್ತಲು ಶುರು ಮಾಡಿದಾಗಲೇ ಬೆಟ್ಟದ ದಾರಿ ಅಷ್ಟೊಂದು ಶುಲಭವಾಗಿರಲಿಲ್ಲ.. ಅದು ಇಳಿಜಾರಿಗೆ ಅಭಿಮುಕವಾಗಿ 75 -78 ಕೋನದಲ್ಲಿ ವಾಲಿಕೊಂಡಿರೋ ಮಾರ್ಗವಾಗಿತ್ತು...

ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ

ಮಳೆಗಾಲ ಚಿಗುರೋಡೆಯುತ್ತಿರುವ ಸಮಯವಾಗಿರೋದ್ರಿಂದ ಹವಾಮಾನ ತುಂಬಾ ತಂಪಾಗಿತ್ತು. ಅದನ್ನು ನಾವು ತುಂಬು ಮನಸಿನಿಂದ ಅನುಭವಿಸುತ್ತಿದ್ದೆವು .. ಹಾಗೆ  ಒಬ್ಬರಿಗೊಬ್ಬರು ಟ್ರೆಕ್ಕಿಂಗ್  ಮಾಡಲು  ಸಹಾಯ ಮಾಡುತ, ಕ್ಯಾಮೆರಾಗೆ ಪೋಸ್ ಕೊಡುತ ಮುಂದೆ ಸಾಗಿದೆವು... 
 ಹಿಂದಿನ ವಾರವೆಲ್ಲ ಸ್ವಲ್ಪ ಮಳೆ ಬಂದಿರೋದ್ರಿಂದ ಬಾನಂತಿಮಾರಿ ಬೆಟ್ಟದ ಮೈಯೆಲ್ಲಾ ಹಸಿರಿನಿಂದ ತುಂಬಿ ತುಳುಕಾಡುತಿತ್ತು... 
ಅಲ್ಲಿಂದ ಸುಮಾರು 40 ನಿಮಿಷಗಳ ದಾರಿ ಕ್ರಮಿಸಿದ ಮೇಲೆ ಒಂದು ಚಿಕ್ಕ ಬೆಟ್ಟ ಅಂದರೆ ಮರಿ ಬೆಟ್ಟದ ಮೇಲೆ ಹೋಗಿ ನಿಂತೆವು... ಅಲ್ಲಿಂದ ಇನ್ನೊಂದು ಬೆಟ್ಟ ಹತ್ತಬೇಕು...

ಬಾಣಂತಿಮಾರಿ ಬೆಟ್ಟ

ಬಾಣಂತಿಮಾರಿ ಬೆಟ್ಟ

ಬಾಣಂತಿಮಾರಿ ಬೆಟ್ಟ

ಬಾಣಂತಿಮಾರಿ ಬೆಟ್ಟ

Gangnam Style


ಬಾಣಂತಿಮಾರಿ ಬೆಟ್ಟ
ಬಾಣಂತಿಮಾರಿ ಬೆಟ್ಟ



ಗ್ಯಾಂಗ್ನಮ್ ಸ್ಟೈಲಲ್ಲಿ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು...  ಕಾಡಿನ ಹಸುರಿನ ನಡುವೆ ಕೋಮಲವಾದ ಬಳ್ಳಿಗಳಿಂದ  ಸುತ್ತಿದ ಒಂದು  ಮರದ ಕೆಳಗೆ ಕುಳಿತು ಹಾಗೆ ಸ್ವಲ್ಪ ವಿಶ್ರಮಿಸಿ ಮತ್ತೆ ಮುಂದೆ ಸಾಗಿದೆವು.
ಸ್ವಲ್ಪ ಮುಂದೆ ಹೋದರೆ ಅಲ್ಲೊಂದು ಹನುಮಾನ್ ದೇವಾಲಯ ಸಿಗುತ್ತೆ... ದೇವರ ದರ್ಶನ ಪಡೆದು ಹಾಗೆ ಇನ್ನೊಂದು 20 ನಿಮಿಷಗಳು ಬೆಟ್ಟದ ಚಾರಣ ಮಾಡಿ ಬೆಟ್ಟದ ತುದಿಯನ್ನು ತಲುಪಿದೆವು.

ಬೆಟ್ಟದ ಮೇಲಿಂದ ಹಾಗೆ ಒಂದು ಸುತ್ತು ಕಣ್ಣು ಹಾಯಿಸಿದರೆ,
 ಮಳೆಯ ನೀರು ಹೀರಿಕೊಂಡ ಬೆಟ್ಟಗುಡ್ಡಗಳ ಮೈ ಎಲ್ಲವೂ ಹಸಿರನ್ನು ಸೃಷ್ಟಿಸಿಕೊಂಡು ಕೋಮಲತೆಯನ್ನು ಮೆರೆಯುತ್ತಿದ್ದವು...
ಆ ಬೆಟ್ಟಗಳನ್ನು ನೋಡಿದರೆ ಬೆಟ್ಟದ ಮಂಜಿನ ತಲೆಯು ಮುಗಿಲಿನಲ್ಲಿ ಒಂದಾಗಿಹೋಗಿದೆ. 
ಪ್ರಕೃತಿಯ ಶಕ್ತಿಪೂರ್ಣ ಸೌಂದರ್ಯವೆಂದರೆ  ಇದೆ. ಅಲ್ಲಿ ಹಸುರಿನಿಂದ ಮೆರೆಯುವ ವನರಾಜಿಯು ಪ್ರಕೃತಿಯ ಸೌಂದರ್ಯವನ್ನು ಪ್ರಕಟಿಸಿದರೆ, ನಮ್ಮ ಕಲ್ಪನೆಯನ್ನು ನಡುಗಿಸುವ ವಿಸ್ತಾರ ಎತ್ತರಗಳು ಅದರ ಗಾಂಭೀರ್ಯವನ್ನು ದರ್ಶಿಸುತ್ತದೆ. ಈ ವನರಾಜಿಯು ಪ್ರಕೃತಿಯ ಜೀವಂತ ಸೌಂದರ್ಯದ ಭವ್ಯರೂಪವಾಗಿ ಕಾಣಿಸುತ್ತಿತ್ತು.. 
ಈ ವನದೆವತೆಯು ಗರ್ಭಿಣಿಯು ಆರನೆಯ  ತಿಂಗಳು ತುಂಬಿದ ಮೇಲೆ, ಕಾಯಿನಿಂದ ತುಂಬಿದ ಮಾವಿನ ಮರದಂತೆ ಈ ಬಾಣಂತಿಮಾರಿ ಬೆಟ್ಟವು ತುಂಬಿಹೋಗಿತ್ತು.. ಕೆಂಪಾದ ಕಾಯಿಗಳಿಂದ ಜಗ್ಗುವ ಮಾವಿನ ಕೊಂಬೆಗಳಂತೆ  ಆ ಬಾಣಂತಿಮಾರಿಯು ಜಗ್ಗುತ್ತಿತ್ತು.. 
ಹಸಿರು  ಸೀರೆಯ ರೇಶಿಮೆ ಸೀರೆಯನ್ನುಟ್ಟರೆ ಎಷ್ಟು ಚೆಂದವೋ ಅಷ್ಟು ಚೆಂದವಾಗಿ ಈ ಬೆಟ್ಟ ಕಾಣಿಸುತ್ತಿತ್ತು... 




ಬೆಟ್ಟದ ರಮಣೀಯ ನೋಟ


ಬೆಟ್ಟದ ಮೇಲೆ ಜೋರಾಗಿ ತಂಪಾದ ಗಾಳಿಗೆ ಬೀಸುತಿರುವಾಗ ನಮ್ಮಲ್ಲಿ ಕೆಲವೊಬ್ಬರು ಮಸ್ತ್ ಮಸ್ತ್ ಪೋಸ್ ಕೊಟ್ಟು ಫೋಟೋಸ್ ತಗೆಸಿಕೊಳ್ತಿದ್ರು:) 
ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ




ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ

ಅಲ್ಲಿಂದ ಮಧ್ಯಾನ 1:20 ಕ್ಕೆ  ಕೆಳಗಿಳಿಯೋದಕ್ಕೆ ಶುರು ಮಾಡಿದೆವು.. ಮಾರ್ಗಮಧ್ಯಲ್ಲಿ  ಬಾಣಂತಿ ಮಾರಿಯಮ್ಮನ ದೇವಸ್ಥಾನಕ್ಕೆ ಹೋಗಿ ಅಲ್ಲೇ ಗಿಡಗಳ ಕೆಳಗೆ ಕುಳಿತುಕೊಳ್ಳಲು ಜಾಗ ಹುಡುಕಿ  ಊಟ ಮಾಡಿದೆವು.. ಇನ್ನೂ ಸ್ವಲ್ಪ ಸಮಯ ಅಲ್ಲೇ ಕಾಲ ಕಳೆಯೋಣವೆಂದರೆ ಮಳೆ ಬರುವ ಲಕ್ಷಣಗಳು ದಟ್ಟವಾಗಿರೋದ್ರಿಂದ ಬೇಗನೆ ಮನೆ ಸೇರುವದು ಒಳಿತು ಅನಿಸಿತು ಆದ ಕಾರಣ ಅಲ್ಲಿಂದ ಹೊರಟು  ಮದ್ಯಾನ 3ಕ್ಕೆ  ಬೆಟ್ಟವಿಳಿದು ಇರುಳಿಗರ ಕಾಲೋನಿ ತಲುಪಿದೆವು. 


ನಮ್ಮ ವಾಹನದ ಹತ್ತಿರ ಎಲ್ಲರೂ ಸೇರಿ ಒಂದು ವೃತ್ತದಲ್ಲಿ ನಿಂತು ಎಲ್ಲರ ಚಾರಣದ ಅಭಿಪ್ರಾಯ ಮತ್ತು BTC ಬಗೆಗಿನ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೇಳಿದರು.. ಅದರಲ್ಲಿ ಎಲ್ಲರಿಂದಲೂ ಒಳ್ಳೆಯ ಅಭಿಪ್ರಾಯವೇ ಮೂಡಿ ಬಂತು....

ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ


ಬಾಣಂತಿಮಾರಿ ಬೆಟ್ಟ

ಅಲ್ಲಿಂದ ಬೆಂಗಳೂರಿನ ಕಡೆಗೆ ಹೊರಟು ಮಾರ್ಗಮಧ್ಯ ಹೋಟೆಲಿನಲ್ಲಿ ಟೀ/ಕಾಫಿ ಕುಡಿದು .. ಮುಂದಿನ ಜಬರ್ದಸ್ತ್ ಕಾರ್ಯಕ್ರಮಕ್ಕೆ ಅಣಿಯಾಗಲು ರೆಡಿ ಆದರು

ಟೀ/ಕಾಫಿ ಸಮಯ


ಟೀ/ಕಾಫಿ ಸಮಯ


ಟೀ/ಕಾಫಿ ಸಮಯ


.... ಅಲ್ಲಿಂದ ಎಲ್ಲರೂ ಬಸ್ಸಿನಲ್ಲಿ ಕುಳಿತುಕೊಳ್ಳೋದೇ ತಡವಾಗಿತ್ತೇನೋ ಅನ್ನೋ ಹಾಗೆ ತಡಮಾಡದೆ ಬಸ್ಸಿನಲ್ಲಿ ಹಾಡುತಿರುವ ಸ್ಪೀಕರ್ ಸಂಗೀತಕ್ಕೆ ಕುಣಿಯಲು ಶುರುವಿಟ್ಟರು ನೋಡ್ರಿ.. ಏನ್ ಅಂತೀರಿ ಆ ಮಜಾ, ಆ ಹುಮ್ಮಸ್ಸು , ಏನು ಆ ಡ್ಯಾಶ್ ಡ್ಯಾಶ್..:)  ..  ಕುಣಿದರು ಕುಣಿದರು ಬೆಂಗಳೂರು ಬಂದರೂ ಕುಣಿಯೋದನ್ನ ನಿಲ್ಲಿಸಲು ತಯಾರಿಲ್ಲದವರಂಗೆ ಕುಣಿಯುತ್ತಿದ್ದರು.... ಹರೀಶ್ ಮಾತ್ರ ಈ ಟೈಮ್ ಜಾಸ್ತಿನೆ ಜೋಶ್ ನಲ್ಲಿದ್ದ ಅನಿಸಿತು... ಎಲ್ಲರನ್ನು ಬಸ್ಸಿನಲ್ಲಿನೆ ಮಾಡಿರೋ ಸ್ಟೇಜ್ ಗೆ ಕರೆದು ಕರೆದು ಕುಣಿಯಲು ಹಚ್ಹುತ್ತಿದ್ದನು..

Cab Mein Dance with Masti 


Cab Mein Dance with Masti 


Cab Mein Dance with Masti 


Cab Mein Dance with Masti 


Cab Mein Dance with Masti 

ಹೇಳ್ಬೇಕು ಅಂದ್ರೆ ಇಲ್ಲಿವರೆಗೂ ಮಾಡಿರೋ ಟ್ರೆಕ್ಕಿಂಗ್ ಜೊತೆ ಡಾನ್ಸ್ ಮಾಡಿರೋದು ಇದೆ ಮೊದಲು.... 
ಒಟ್ಟಿನಲ್ಲಿ ಟ್ರೆಕ್ಕಿಂಗ್  ಜೊತೆ ಮಸ್ತ್ ಡಾನ್ಸ್ ಮತ್ತು ಸೂಪರ್ ದುಪೆರ್ ಮಜಾ ಮಾಡಿರೋದ್ರಲ್ಲಿ ಎಂದು ಮರೆಯದ ಪ್ರವಾಸ ಕಥನವಾಯಿತು... 
ಬೆಂಗಳೂರಿಗೆ ಸಾಯಂಕಾಲ 5:30 ಕ್ಕೆ ತಲುಪಿದೆವು... 
ಮತ್ತೊಂದು ಪ್ರವಾಸ ಯಶಸ್ವಿಯಾಯಿತು.. 
ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿ ತಮ್ಮ ತಮ್ಮ ಗೂಡಿಗೆ ಸೇರಿದರು... 



ಕೃತಜ್ಞತೆಗಳು:-
ರುವೈಸ್ ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಭಾಗವಹಿಸಿದ ಎಲ್ಲ  ಸಹ ಚಾರಣಿಗರು 


ಮಾಹಿತಿ:-

ಟ್ರೆಕ್ಕಿಂಗ್ ದೂರ : ಸುಮಾರು 5 ಕಿ.ಮೀ.
ಬೆಟ್ಟ ಹತ್ತುವ ದೂರ: ಮುಖ್ಯ ದ್ವಾರದಿಂದ ಬೆಟ್ಟದ ತುದಿಗೆ ಸುಮಾರು 2.5 ಕಿ.ಮೀ..
ಬೆಟ್ಟ ಇಳಿಯುವ ದೂರ: ಬೆಟ್ಟದ ತುದಿಯಿಂದ ಕೆಳಗಿರೋ ಮುಖ್ಯ ದ್ವಾರಕ್ಕೆ ಸುಮಾರು 2.5 ಕಿ.ಮೀ.

ಹತ್ತಿರದ ಪಟ್ಟಣ: ಕನಕಪುರ 


ಸ್ಥಳ: ಬಾಣಂತಿಮಾರಿ  ಬೆಟ್ಟ , ಕನಕಪುರ ತಾಲೂಕು ಮತ್ತು ರಾಮನಗರ ಜಿಲ್ಲೆ 
ದೂರ: 53-55ಕಿ.ಮೀ.
ಬೆಂಗಳೂರಿನಿಂದ  ಕನಕಪುರಕ್ಕೆ  50 ಕಿ.ಮೀ. ಮತ್ತು ಕನಕಪುರದಿಂದ  ಇರುಳಿಗರ ಕಾಲೋನಿ 3-5  ಕಿ.ಮೀ. 
ಹೋಗುವ ಬಗೆ: ಸ್ವಂತ ವಾಹನ/ ಬಸ್ಸು
ಮಾರ್ಗ:-
ಬೆಂಗಳೂರು-->ಕನಕಪುರ -->ಇರುಳಿಗರ ಕಾಲೋನಿ--> ಬಾಣಂತಿಮಾರಿ  ಬೆಟ್ಟ




....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....




2 comments:

Harish Surampade said...

Savinenapugalannu Sariyaada Samayadalli Serehididu Sogasaada Sambhashanegalondige Seriso Sogadige nimage neeve Sari Saati.

Channa padada arthave neevagiddeera...

Channabasappa Nad said...

Thanks pa Harish...
idekella kaarana nimma sahakaara....