Wednesday 12 June 2013

ಕಬ್ಬಾಳದುರ್ಗ ಚಾರಣ - (Trek To Kabbala Durga - 9th June 2013)

ಕಬ್ಬಾಳದುರ್ಗ:-
ಕಬ್ಬಾಳದುರ್ಗ ಇರೋದು ಬೆಂಗಳೂರಿಂದ ಕನಕಪುರದ ಕಡೆಗೆ ಸುಮಾರು 86 Km  ದೂರದಲ್ಲಿ. 
ಇದೊಂದು ಧಾರ್ಮಿಕ ಮತ್ತು ಪ್ರವಾಸಿ ತಾಣ. ಬೆಟ್ಟದ ಮೇಲೆ ಕಬ್ಬಾಳಮ್ಮ ದೇವಸ್ಥಾನವಿರೋದ್ರಿಂದ ಈ ಬೆಟ್ಟಕ್ಕೆ  ಕಬ್ಬಾಳದುರ್ಗ ಅಂತ ಹೆಸರು ಬಂದಿದೆ.  ಸುತ್ತಮುತ್ತಲಿನ ಹಳ್ಳಿಗಳಿಗೆ ಈ ದೇವಸ್ಥಾನ ತುಂಬಾ ಪ್ರಸಿದ್ದಿ ಪಡೆದಿರೋದು ಅಲ್ಲಿಗೆ ಹರಕೆ ತೀರಿಸಲು ಬರುವ ಭಕ್ತಾದಿಗಳನ್ನ ನೋಡಿದರೆ ಗೊತ್ತಾಗುತ್ತೆ. ಅದೇನೇ ಇರಲಿ ಒಟ್ಟಿನಲ್ಲಿ ಹೇಳಬೇಕು ಅಂದ್ರ ಇದೊಂದು ಟ್ರೆಕ್ಕಿಂಗ್ ಪ್ರಿಯರಿಗೆ ಹೇಳಿಮಾಡಿಸಿರೋ  ಸ್ಥಳ. 

ಪ್ರವಾಸ ಕಥನ/ಟ್ರೆಕ್ಕಿಂಗ್  ವಿವರ:-

ಹ್ಮ್ ಮುಂಜಾನೆದ್ದು ಹೊಟ್ಟೆ ತುಂಬಾ ತಿಂದಿದ್ದಾಯ್ತು ಹಂಗ ಒಂದಿಷ್ಟು ಬ್ಲಾಗ್ ಬರೆದ್ರ ಚುಲೋ ಅನಿಸ್ತದ ..
ಮಳೆಗಾಲ ಚಾಲು ಆದ್ರೂ ನಮ್ಮೂರ ಕಡೆ ಮಳೆನೆ ಬರಾವಲ್ದು .. ಆ ಉರಿಬಿಸಿಲಿಗೆ  ಜನ ಜಾನುವಾರುಗಳು  ಹ್ಯಾಂಗ್ರಿ  ಬದುಕ್ಬೇಕು?
ಬೆಂಗಳುರಿನ್ಯಾಗ ಏನು ಇಲ್ಲಾ ಅಂದ್ರೂ ಸ್ವಲ್ಪ ತಂಡನೆ ಗಾಳಿಯಾರಾ ಬೀಸ್ತಾದ... ಉತ್ತರ ಕರ್ನಾಟಕದ ಕಡೆ ಮಳೆಗಾಲ ಬಂದ್ರು ಕುಡಿಯುವ ನೀರಿಗೆ ಬರಗಾಲ ಇದೆ.. ಆದಷ್ಟು ಬೇಗ ಮಳೆ ಆಗ್ಲಿ ಅಂತ ಹಾರೈಸೋಣ.. 
ಅಂದಂಗ ನಾ ಆರಾಮ್ ಇದೀನಿ ಮತ್ತ  ನೀವೆಲ್ಲಾರೂ ಹ್ಯಾಂಗಿದ್ದಿರೀ.. ಎಲ್ಲಾರೂ ಆರಾಮ್ ಇದ್ದೀರಿ ಅನ್ಕೊಂಡು ನಮ್ಮ ಮತ್ತೊಂದು ಎಂದು ಮರೆಯಲಾಗದ ಪ್ರವಾಸ ಕಥನ ಶುರು ಮಾಡಾನು ಬರ್ರೀ... 

"ಯಾರೇ ಕೂಗಾಡಲಿ ಊರೆ ಹೋರಾಡಲಿ ನಮ್ಮ ಟ್ರೆಕ್ಕಿಂಗ್ ಗೆ ಬಂಗವಿಲ್ಲ.. 
ಮಳೆಯೇ ಬರಲಿ, ಬಿಸಿಲೆ ಇರಲಿ ನಮ್ಮ ಟ್ರೆಕ್ಕಿಂಗ್ ನಿಲ್ಲೋದಿಲ್ಲ"..  

ನನ್ನ ರೂಮ್ಮೇಟ್ ಮದುವೆ ಮುಗಿಸಿಕೊಂಡು ಒಂದು ತಿಂಗಳಾದ ಮೇಲೆ ಮತ್ತೆ ಟ್ರೆಕಿಂಗ್ ಶುರು ಮಾಡ್ತಿದೀನಿ.. 
ಅಂದುಕೊಂಡಂತೆ ಈ ಬಾರಿ 20 ರಿಂದ 25 ಜನರು ಹೋಗೋಣ ಅಂತ ಅನ್ಕೊಂಡಿದ್ವಿ .. ಆದ್ರ ಅದು ಬೇರೇನೆ ಆಗಿದ್ದು,  ಈ ಸಾರಿ ಒಟ್ಟು 35 ಜನರು ಟ್ರೆಕ್ಕಿಂಗ್ ಗೆ ಬರೋದ್ಕೆ ರೆಡಿ ಆಗಿದ್ರು. 
ನಾವು ಅಂದುಕೊಂಡಿರೋದಕ್ಕಿಂತಲೂ ಜಾಸ್ತಿ ಜನರಿರುವದ್ರಿಂದ ಎರಡು ಟೆಂಪೋ ಟ್ರಾವೆಲ್ಲರ್ (TT-Tempo Travellers) ಮತ್ತು ಎರಡು ಕಾರುಗಳಲ್ಲಿ ಹೋಗೋದು ಅಂತ ನಮ್ಮ ಪ್ಲಾನ್ ರೆಡಿ ಆಗಿತ್ತು 
ನಾನು ಪದ್ಮಿನಿಯವರ ಕಾರಿನಲ್ಲಿ ಹೋಗುವದು ಮತ್ತು ಎಲ್ಲರೂ ಬನಶಂಕರಿ ಬಸ್ಸು ನಿಲ್ದಾಣದ ಹತ್ತಿರ ಸೇರಿ ಅಲ್ಲಿಂದ ಬೆಳಿಗ್ಗೆ 7 ಕ್ಕೆ ಕಬ್ಬಾಳದುರ್ಗಕ್ಕೆ ಹೋಗುವದು ಅಂತ ಎರಡು ದಿನ ಮುಂಚೆನೇ ಚೈತನ್ಯ  ಎಲ್ಲರಿಗೂ ಮಿಂಚಂಚೆ ಕಳಿಸಿದ್ದ. 

ಭಾನುವಾರ ಬೆಳಿಗ್ಗೆ 6 ಕ್ಕೆ ಹೊರಟು ಪದ್ಮಿನಿ ಮತ್ತು ಅನುರವರು ಸದಾಶಿವನಗರದಿಂದ ಮಲ್ಲೇಶ್ವರಂ ಗೆ ಬಂದರು.  ನಾನು 6.10 ಕ್ಕೆ ಪದ್ಮಿನಿಯವರ ಕಾರು ಹತ್ತಿದೆ. ಅಲ್ಲಿಂದ ನಾವು ಮುಂದೆ ಪ್ರನಾಲಿ ಮತ್ತು ಪಾರ್ವತಿಯವರನ್ನ ಕುಮಾರ ಕೃಪಾ ರಸ್ತೆ ಮತ್ತು ಜಯನಗರ 4ನೇ ಬಡಾವಣೆಯಲ್ಲಿ ಕಾರು ಹತ್ತಿಸಿಕೊಂಡು ಬನಶಂಕರಿ ಬಸ್ಸು ನಿಲ್ದಾಣಕ್ಕೆ 6:35 ಕ್ಕೆ ತಲುಪಿದೆವು.  ಅಲ್ಲಿ ನೋಡಿದರೆ ನಮ್ಮ ತಂಡದವರು ಯಾರೂ ಬಂದೆ ಇಲ್ಲ. ಎಲ್ಲರಿಗಿಂತಲೂ ಮುಂಚೆ ನಾವೇ ಮೀಟಿಂಗ್ ಪಾಯಿಂಟ್ ಗೆ ಬಂದಿದ್ದೆವು. 
ಚೈತನ್ಯ 7 ಕ್ಕೆ ಬಂದನು. ಆಮೇಲೆ ಹರೀಶ್ ಮತ್ತು ಮೇಘರಾಜ್ ಗೆ ಕಾಲ್ ಮಾಡಿ ಎಲ್ಲಿದ್ದೀರಾ, ಎಲ್ಲರೂ ಗಾಡಿ ಹತ್ತಿದರಾ ಹೆಂಗೆ ಅಂತ ವಿಚಾರಿಸಲು ತೊಡಗಿದೆವು. ಹಾಗೆ ಹೀಗೆ ಮಾಡಿ 7:15ಕ್ಕೆ ಒಂದು TT ಬಂದಿತು. 
ಮೇಘರಾಜ್ ಇರೋ TT  ಬರಲು ಇನ್ನು ತುಂಬಾ ತಡವಾಗುತ್ತೆ ಮತ್ತು ನಾವು ನಿಮ್ಮನ್ನ ಮಾರ್ಗ ಮಧ್ಯೆ ನಿಮ್ಮ ತಂಡವನ್ನು ಸೇರುತ್ತೇವೆ ಅಂತ ಹೇಳಿದ ಆದ ಕಾರಣ ನಾವು ಅಲ್ಲಿಂದ ಹೊರಡಲು ಡಿಸೈಡ್ ಮಾಡಿದೆವು. 
ಬೆಳಿಗ್ಗೆ 7:20 ಕ್ಕೆ ಬನಹಂಕರಿ ಬಸ್ ನಿಲ್ದಾಣದಿಂದ ಹೊರಟೆವು.. ಮಾರ್ಗಮಧ್ಯ ರಘುನಂದನ್ ರವರು ಕಾರಿನಲ್ಲಿ ನಮ್ಮ ತಂಡ ಸೇರಿದರು.. ಬೆಳಿಗ್ಗೆ 8:20 ಕ್ಕೆ ಕನಕಪುರದಲ್ಲಿರೋ ಶ್ರೀನಿವಾಸ ಸಾಗರ್ ಹೋಟೆಲಲ್ಲಿ ಬೆಳಗಿನ ನಾಷ್ಟ ಮಾಡಿ ,  ನಾಷ್ಟ ಪಾರ್ಸೆಲ್ ಕಟ್ಟಿಸಿ ಅಲ್ಲೇ ಹೋಟೆಲಲ್ಲಿ ಇಟ್ಟು ಹೋಗಿರಿ ಅದನ್ನ ಮೇಘರಾಜ್ ಆಮೇಲೆ ತಗೊತೀವಿ ಮತ್ತು ಟೆಂಪೋದಲ್ಲೇ ನಾಷ್ಟ ಮಾಡ್ತೀವಿ ಅಂತ ಹೇಳಿದ ಮತ್ತು ಮಧ್ಯಾನದ ಊಟ ಪಾರ್ಸೆಲ್ ತಗೊಂಡು ಅಲ್ಲಿಂದ ಹೊರಟು ಬೆಳಿಗ್ಗೆ 9 ಕ್ಕೆ ಕಬ್ಬಾಳುದುರ್ಗ ತಲುಪಿದೆವು.  ಮೇಘರಾಜ್ ತಂಡ ಕೂಡ ನಮ್ಮ ತಂಡದೊಡನೆ ಸೇರಿತು.

In cab


@ Kanakapura


ಒಬ್ಬರಿಗೊಬ್ಬರ ಪರಿಚಯಿಸಿಕೊಳ್ಳೋ  ಸಮಯ

ಒಬ್ಬರಿಗೊಬ್ಬರ ಪರಿಚಯಿಸಿಕೊಳ್ಳೋ  ಸಮಯ

ಕಮಲಿ:)


ಅಲ್ಲೇ ಒಬ್ಬರಿಗೊಬ್ಬರ ಪರಿಚಯ ಮಾಡಿಸಿಕೊಂಡು 9:15 ಕ್ಕೆ ಶುರುವಾಯಿತು ನೋಡ್ರಿ ನಮ್ಮ ಟ್ರೆಕ್ಕಿಂಗ್ ಪಯಣ.  
35 ಜನರ ದೊಡ್ಡ ಗುಂಪಾಗಿರೋದ್ರಿಂದ ಸ್ವಲ್ಪ ಸ್ವಲ್ಪ ಜನರ ಚಿಕ್ಕ ಚಿಕ್ಕ ಗುಂಪಾಗಿ ಭಾಗಿಸಿ ಒಂದು ಗುಂಪಿಗೆ ಒಬ್ಬರನಂತೆ ಚುಕ್ಕಾಣಿ ಕೊಟ್ಟರು. ಕಾರಣ ಇಷ್ಟೇ ಒಬ್ಬರೇ ಮುಂದಾಳತ್ವ ವಹಿಸಿದರೆ ಎಲ್ಲರನ್ನು ಮ್ಯಾನೇಜ್ ಮಾಡೋದು ಸ್ವಲ್ಪ ಕಷ್ಟ ಮತ್ತು ಟ್ರೆಕ್ಕಿಂಗ್ ಮಾಡೋವಾಗ ಯಾರಿಗೂ ತೊಂದರೆಯಾಗದಿರಲಿಯಂತ ಹೀಗೆ ಗುಂಪಾಗಿ ಭಾಗಿಸಿದೆವು. ಆದರೆ ಎಲ್ಲರೂ ಒಗ್ಗಟ್ಟಿನಿಂದ ಟ್ರೆಕ್ಕಿಂಗ್ ಮಾಡಬೇಕು. 

ಕಬ್ಬಾಳದುರ್ಗ 

ಕಬ್ಬಾಳದುರ್ಗ

ಕಬ್ಬಾಳದುರ್ಗ


ಈ ಸಾರಿ ಟ್ರೆಕ್ಕಿಂಗ್ ಬಂದಿರೋರಲ್ಲಿ ತುಂಬಾ ಜನರು ಮೊದಲನೇ ಬಾರಿ ಟ್ರೆಕ್ಕಿಂಗ್ ಮಾಡುವವರಾಗಿದ್ದರು ಆದ ಕಾರಣ ಅವರು ತುಂಬಾ ಬ್ರೇಕ್ಸ್ ತಗೊಂಡು ತಗೊಂಡು ಹತ್ತುತಿದ್ದರು. ಆದರೆ ನಮ್ ಹರೀಶ್ ಮಾತ್ರ ಈ ಸಾರಿ ಕನಕಪುರ ತಟ್ಟೆ ಇಡ್ಲಿ ಮಹಿಮೇನೋ ಏನೋ ನಾ ಕಾಣೆ, ಅವ್ನು ತುಂಬಾ ಕಷ್ಟಕರವಾದ ದಾರಿಯಿಂದ ಟ್ರೆಕ್ಕಿಂಗ್ ಮಾಡುತ ಎಲ್ಲರಿಗಿಂತಲೂ ಮುಂದೆ ಸಾಗುತ್ತಿದ್ದ.. ಹಾಗೆ ತುಂಬಾ ವಿಶ್ರಾಂತಿಗಳ ಮಧ್ಯೆ  ಫೋಟೋಸ್ ಗೆ ಪೋಸ್ ಕೊಡೋದು ಮಾತ್ರ ಮರಿಲಿಲ್ಲ.:)

@ ಕಬ್ಬಾಳದುರ್ಗ 

ಕಬ್ಬಾಳದುರ್ಗ

ಕಬ್ಬಾಳದುರ್ಗ

ಕಬ್ಬಾಳದುರ್ಗ


ಕಬ್ಬಾಳದುರ್ಗ

ಪೋಸ್ ಗೆ ಟಾರ್ಚಾ

ಕಬ್ಬಾಳದುರ್ಗ

ಮಧ್ಯಾನ   ಸುಮಾರು 11:45 ಕ್ಕೆ ಬೆಟ್ಟದ ಮೇಲಿರುವ ಕಬ್ಬಾಳಮ್ಮ ದೇವಸ್ಥಾನ ತಲುಪಿದೆವು.. ಬೆಟ್ಟದ ಮೇಲಿಂದ ನಿಂತು ಸುತ್ತಮುತ್ತಲು ನೋಡಿದರೆ  ಆಹಾ.... ಏನು ಆ ಸೌಂದರ್ಯ ಏನು ಆ ಸೊಬಗು ಮಾತಿನಲ್ಲಿ ಹೇಳಲಾರೆನು. ಆ ಸೌಂದರ್ಯವನ್ನು  ಸವಿಯಲು ಒಂದು ಜನ್ಮ ಸಾಲದು.
ಕಬ್ಬಾಳಮ್ಮ ದೇವಾಲಯ

ತಣ್ಣನೆ ಗಾಳಿಯು ಅತಿ ವೇಗದಲ್ಲಿ ಚಲಿಸುತ ಹೇಳುತಿತ್ತು ಟ್ರೆಕ್ಕಿಂಗ್ ಮಾಡಿ ಹುಮ್ಮಸ್ಸಿನಿಂದ ಕುಣಿದಾಡುತಿದ್ದೀರಾ  ಬನ್ರೋ ನನ್ ಜೊತೆ ಒಂದು ಸ್ಕೈ ಡೈವಿಂಗ್ ಆಟವಾಡೋಣ... ಅದಕ್ಕೆ ನಾವು ಬಿಡ್ತೀವ, ನಾವು ರೆಡಿ ಅಂತ ಸಂತೋಷ್ ಸ್ಕೈ ಡೈವಿಂಗ್ ಟ್ರೈ ಮಾಡಿದ ಆದರೆ ಮೊದಲ ಪ್ರಯತ್ನವಾಗಿರೋದ್ರಿಂದ ವಾಯುಪುತ್ರನ ಜೊತೆ ಸೋಲಬೇಕಾಯಿತು.. ಸೋಲೇ ಗೆಲುವಿನ ಸೋಪಾನ ಅಂತ ಭಾವಿಸಿ ಮುಂದಿನ ಸಾರಿ ಬಾ ನೋಡ್ಕೋತೀನಿ ಅಂತ ಹೇಳಿದೆವು...!!!!!!

ಕಬ್ಬಾಳದುರ್ಗ

ಕಬ್ಬಾಳದುರ್ಗ

ಕಬ್ಬಾಳದುರ್ಗ

ಸೌಂದರ್ಯ  ಸಮರ

ಸೌಂದರ್ಯ  ಸಮರ

ಕಬ್ಬಾಳದುರ್ಗ

ಹುಟ್ಟುಹಬ್ಬದ  ಸಡಗರ:

ಜೂನ್ 8ನೇ  ತಾರೀಖು ನನ್ನ ಹುಟ್ಟುಹಬ್ಬವಿರೋದ್ರಿಂದ ನಾನು BTC ಪರಿವಾರದ ಜೊತೆ ಇನ್ನೊಂದು ಕೇಕನ್ನು ಜೂನ್ 9 ನೇ ತಾರೀಖಿಗೆ ಕಬ್ಬಾಳಮ್ಮ ಬೆಟ್ಟದ ಮೇಲೆ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ... ಪ್ರಕೃತಿಯ ಸೌಂದರ್ಯದ ಮಡಿಲಲ್ಲಿ ಅದು ಬೆಟ್ಟದ ತುತ್ತ ತುದಿಯ ಮೇಲೆ ಕುಳಿತು ಕೇಕ್ ಕಟ್ ಮಾಡೋದು ಅಂದ್ರೆ ಹೆಂಗಿರುತ್ತೆ ಅಂತ ಸ್ವಲ್ಪ ಊಹಿಸಿಕೊಳ್ಳಿ.... ಅಂತದೊಂದು ಅವಕಾಶ ನನಗೆ ದೊರೆತಿರೋದಕ್ಕೆ ಮತ್ತು ಆ ಅವಕಾಶ ದೊರೆಯುವ ಹಾಗೆ ಮಾಡಿದ BTC  ಪರಿವಾರಕ್ಕೆ ನಾನು ಯಾವತ್ತು ಚಿರಋಣಿ. 
ಹುಟ್ಟುಹಬ್ಬದ ಸಡಗರ

ಹುಟ್ಟುಹಬ್ಬದ ಸಡಗರ

ಹುಟ್ಟುಹಬ್ಬದ ಸಡಗರ

ಹುಟ್ಟುಹಬ್ಬದ ಸಡಗರ

ಹುಟ್ಟುಹಬ್ಬದ ಸಡಗರ


ಕೇಕ್ ಕಟ್ ಮಾಡಿದ್ದೆ ತಡವಾಯಿತೇನೋ ಅನ್ನೋ ಹಾಗೆ ವೆಂಕಟೇಶ್ ಮತ್ತು ಇನ್ನುಳಿದವರು ನಂಗೆ ಮಸ್ತ್ ಹುಟ್ಟುಹಬ್ಬದ ಗಿಫ್ಟ್ ಕೊಟ್ರು.  ಏನ್ ಕೊಟ್ರು ಅಂದುಕೊಂಡಿದ್ದಿರಾ?
ಅವರು ಕೊಟ್ಟಿದ್ದು ಮಸ್ತ್ ಬರ್ತ್ಡೇ ಬಂಪ್ಸ್.. ಮತ್ತೆ ಈ ಚಾನ್ಸ್ ಸಿಗೋದಿಲ್ಲ ಅಂತ ಒಳ್ಳೆ ಹೊಡೆತಗಳನ್ನು ಕೊಟ್ರು... 
ಈ ಹುಟ್ಟುಹಬ್ಬದ ಆಚರಣೆ ನಾನು ನನ್ನ ಜೀವನದಲ್ಲಿ ಮರೆಯಲಾಗದ ಒಂದು ಒಳ್ಳೆ ಅನುಭವ... 

ಅದಾದ ಮೇಲೆ ಎಲ್ಲರೂ ಊಟ ಮುಗಿಸಿಕೊಂಡು.. ಅಲ್ಲೇ ಸ್ವಲ್ಪ ಸಮಯ ಬೆಟ್ಟದ ಮೇಲೆ ಸುತ್ತಾಡಿ ಸುತ್ತಲಿನ ಪ್ರಕೃತಿಯ ಸೌಂಧರ್ಯದ ಅಂದದಲಿ ಮೈ ಮರೆತು ಫೋಟೋಸ್ ಗೆ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು..

ನಮ್ಮ ತಂಡ @ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ


@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

ಮೇಘರಾಜ್ ಒಬ್ಬನೇ ನಗ್ತಿದ್ದಿಯಾ ಏನ್ ಸಮಾಚಾರ


@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

@ ಕಬ್ಬಾಳದುರ್ಗ

ಮಳೆ ಬರುವ ಸೂಚನೆಗಳು ಕಾಣಿಸಿರೋದ್ರಿಂದ ಮಧ್ಯಾನ 1:35 ಕ್ಕೆ ಕೆಳಗಿಳಿಯಲು ಶುರು ಮಾಡಿದೆವು... ಇಳಿಯುವಾಗ ಮೊದಲನೇ ಸಾರಿ ಟ್ರೆಕ್ಕಿಂಗ್ ಮಾಡುವವರಿಗೆ ಸ್ವಲ್ಪ ಕಷ್ಟವಾಗುತ್ತಿದ್ದರಿಂದ ವಿಶ್ರಾಂತಿ ಜೊತೆಗೆ ಫೋಟೋಸ್ ತಗೆದುಕೊಳ್ಳುತ ಮಧ್ಯಾನ 3 ಕ್ಕೆ ಕೆಳಗೆ ಬಂದೆವು. 
ಅಲ್ಲಿಂದ ಸುಮಾರು 3:30 ಕ್ಕೆ ಹೊರಟು ಸಾಯಂಕಾಲ 6 ಕ್ಕೆ ಬೆಂಗಳೂರು ಸೇರಿದೆವು...ಮತ್ತೊಂದು ಟ್ರೆಕ್ಕಿಂಗ್ ಯಶಸ್ವಿಯಾಗಿದ್ದಕ್ಕೆ  ಒಬ್ಬರಿಗೊಬ್ಬರು ಶುಭಾಷಯಗಳನ್ನ ಹೇಳಿ ತಮ್ಮ ತಮ್ಮ ಗೂಡಿಗೆ ಮರಳಿದರು.


ಕೃತಜ್ಞತೆಗಳು:-
ಚೈತನ್ಯಕುಮಾರ್  ಎ  ಮತ್ತು ಮೇಘರಾಜ್ ಗುಲ್ಬರ್ಗ ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಭಾಗವಹಿಸಿದ ಎಲ್ಲ  ಸಹ ಚಾರಣಿಗರು 


ಮಾಹಿತಿ:-

ಟ್ರೆಕ್ಕಿಂಗ್ ದೂರ : ಸುಮಾರು 4 ಕಿ.ಮೀ.
ಬೆಟ್ಟ ಹತ್ತುವ ದೂರ: ಮುಖ್ಯ ದ್ವಾರದಿಂದ ಬೆಟ್ಟದ ತುದಿಗೆ ಸುಮಾರು ಕಿ.ಮೀ..
ಬೆಟ್ಟ ಇಳಿಯುವ ದೂರ: ಬೆಟ್ಟದ ತುದಿಯಿಂದ ಕೆಳಗಿರೋ ಮುಖ್ಯ ದ್ವಾರಕ್ಕೆ ಸುಮಾರು ಕಿ.ಮೀ.

ಹತ್ತಿರದ ಪಟ್ಟಣ: ಸಾತನೂರು /ಕನಕಪುರ 


ಸ್ಥಳ: ಕಬ್ಬಾಳು , ಕನಕಪುರ ತಾಲೂಕು ಮತ್ತು ರಾಮನಗರ ಜಿಲ್ಲೆ 
ದೂರ: 86 ಕಿ.ಮೀ.
ಬೆಂಗಳೂರಿನಿಂದ  ಕನಕಪುರಕ್ಕೆ  50 ಕಿ.ಮೀ. ಮತ್ತು ಕನಕಪುರದಿಂದ ಸಾತನೂರಿಗೆ 28  ಕಿ.ಮೀ. ಸಾತನೂರಿಂದ ಕಬ್ಬಾಳಿಗೆ 8 ಕಿ.ಮೀ
ಹೋಗುವ ಬಗೆ: ಸ್ವಂತ ವಾಹನ/ ಬಸ್ಸು
ಮಾರ್ಗ:-
ಬೆಂಗಳೂರು-->ಕನಕಪುರ -->ಸಾತನೂರು--> ಕಬ್ಬಾಳು(ಕಬ್ಬಾಳದುರ್ಗ) 
....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....


2 comments:

svraghunandan said...

ಬಹಳ ಚಂದಬರೆದಿದ್ದಿ ತಮ್ಮ ತುಂಬ ಚೊಲೋ ಇತ್ತು ನಿಮ್ಮೆಲ್ಲರ ಸಹಕಾರ

Channabasappa Nad said...

thank you sir...