Monday, 29 April 2013

ಮಧುಗಿರಿ ಬೆಟ್ಟದ ಮೇಲೆ ಆರು ರಾಜರ ಆಕ್ರಮಣ...............................(Trek to Madhugiri Hill) 31-03-2013


ಮಧುಗಿರಿ:-
ಮಧುಗಿರಿ (3930 ft) ಇದು ಏಷಿಯಾದ ಖಂಡದ ಎರಡನೆ ಒಂದೇ ಕಲ್ಲಿನ(ಏಕ ಶಿಲಾ) ದೊಡ್ಡ ಬೆಟ್ಟ... ಜನರು ಇದನ್ನ "VERTICAL  LIMIT, DARING  TREK ಇತ್ಯಾದಿ ಇತ್ಯಾದಿಯಾಗಿ ಕರಿತಾರೆ. ಇದರ ಇನ್ನೊಂದು ವಿಶೇಷತೆಯೆಂದರೆ 11  ಗೋಡೆಗಳಿವೆ.. ಇದೊಂದು ಒಂದು ದಿನದ(ದಿನಕ್ಕೆಂದೇ ಹೇಳಿಮಾಡಿಸಿದ) ಮಸ್ತ್ ಟ್ರೆಕ್ಕಿಂಗ್ ಜಾಗ... ಇದರ ಬಗ್ಗೆ ಇನ್ನೂ  ಜಾಸ್ತಿ ತಿಳಿದುಕೋಬೇಕು ಅಂದ್ರೆ ಗೂಗಲ್ನಲ್ಲಿ ಸರ್ಚ್ ಮಾಡಿ:)

ಟ್ರೆಕ್ಕಿಂಗ್ ವಿವರ:-

ವ್ಯವಸ್ತಿತ ಪ್ಲಾನ್ ಪ್ರಕಾರ ಬೆಳಿಗ್ಗೆ 5ಕ್ಕೆ ಯಶವಂತಪುರ ಹತ್ತಿರ ಇರೋ ತಾಜ್ ವಿವಾಂತ ಹೋಟೆಲ್ ಇಂದ ಆರು ರಾಜರು ಮಧುಗಿರಿ ಬೆಟ್ಟಕ್ಕೆ ಆಕ್ರಮಣ ಮಾಡಲು ಹೊರೆಟೆವು... 
ಬೇಸಿಗೆ ಇದ್ದರು ಕೂಡ ಆ ದಿನ ಸ್ವಲ್ಪ ಮಂಜು ಕವಿದ ವಾತಾವರಣವಿತ್ತು.. ಮುಂಜಾನೆದ್ದು ಅಂತ ತಂಪಾದ ವಾತವರಣದಲ್ಲಿ ಹೈವೇ ಮೇಲೆ ಬೈಕ್ ರೈಡ್ ಮಾಡೋದು ಅಂದ್ರೆ ಆ ಮಜಾನೆ ಬೇರೆ.. ಆರು ರಾಜರು ಆಕ್ರಮಣಕ್ಕೆ ಬರ್ತಿದ್ದಾರೆ ದಾರಿ ಬಿಡಿ ಅಂತಿದ್ರೆನೋ .. ಹಾಗಿತ್ತು ಆ ಬೆಳಗಿನ ಜಾವದ ಬೈಕ್ ರೈಡಿಂಗ್ ... 
ಸುಮಾರು ಬೆಳಿಗ್ಗೆ 6ಕ್ಕೆ ದಾಬಸಪೇಟೆ ತಲುಪಿ ಅಲ್ಲಿಂದ ಸ್ವಲ್ಪ ಎಡ ತಿರುವು ತಗೆದುಕೊಂಡು ಮಧಿಗಿರಿ ದಾರೀಲಿ ಸಾಗಿತು ಈ ನಮ್ಮ ಆರು ರಾಜರ ಪ್ರಯಾಣ..... 
ಮಾರ್ಗ ಮದ್ಯ ಒಂದು ಚಿಕ್ಕ ಕೆರೆ ಸಿಕ್ಕಿತು ಅದು ಹೇಳಿ ಕೇಳಿ ಸೂರ್ಯೋದಯದ ಸಮಯ.. ಅದುನ್ನ ನಾವು ಮಿಸ್ ಮಾಡ್ಕೊಂತಿವಾ?
ಆ ಕೆರೆ ಹತ್ತಿರ ಹೋಗಿ ಸೂರ್ಯೋದಯವನ್ನು ಕಣ್ಣಾರೆ ಕಂಡು ಕನ್ನಡ ಅರಸು ಮೂವಿಯಲ್ಲಿ ಪುನೀತ್ ರಾಜಕುಮಾರ್ ಹೇಳೋ ಹಾಗೆ ವಾವ್  ಆ ಸನ್ರೈಸ್  ನೋಡ್ರಿ  ಅಂತ ಒಬ್ಬರಿಗೊಬ್ಬರು ಹೇಳುತ ಕುಣಿದಾಡಿದೆವು...:)
ಹಳ್ಳಿಯಲ್ಲಿರೋರಿಗೆ ಇದೊಂದು ಮಾಮೂಲಿ ಸೂರ್ಯೋದಯ ಅನ್ಸುತ್ತೆ ಆದ್ರೆ ಈ ಪ್ಯಾಟೆಯಲ್ಲಿರೋ ಜನರಿಗೆ ಅದು ಒಂದು ಪ್ರಕೃತಿಯ ಅದ್ಭುತವೇ ಸರಿ...  ಈ ಬೆಂಗಳೂರಿನಲ್ಲಿರೋ ಜನ ಬೆಳಿಗ್ಗೆ ಏಳೋದೇ ತುಂಬಾ ಲೇಟು ... ಅವರು ಏಳೋದ್ರೋಳ್ಗೆ ಸೂರ್ಯೋದಯವಾಗಿರುತ್ತೆ... ಅಪ್ಪಿ ತಪ್ಪಿ ಬೆಳಿಗ್ಗೆ ಬೇಗ ಎದ್ದಿದ್ದಾರೆ ಅನ್ಕೋರಿ ಸೂರ್ಯೋದಯದ ಸಮಯದಲ್ಲಿ ಆಫೀಸ್ ಒಳಗೆ ಹೊಕ್ಕಿರ್ತಾರೆ, ಹೊರಗೆ ಬರೋದೆ ಇಲ್ಲ... ಹೀಗಾಗಿ ಅವ್ರಿಗೆ ಸೂರ್ಯೋದಯ ಸೂರ್ಯಾಸ್ತ  ಯಾವಾಗ ಆಗುತ್ತೆ ಅಂತಾನೆ ಗೊತ್ತಿರೋದಿಲ್ಲ....... ಅದಕ್ಕೆ ಈ ಜನರಿಗೆ ಈ ಅನುಭವ ಅಂದರೆ ಏನೋ ಮನಸ್ಸಿಗೆ ಆನಂದ ಮತ್ತು ತೃಪ್ತಿ ಕೊಡುತ್ತೆ. ಅಂತು ಇಂತೂ ಸೂರ್ಯೋದಯ ನೋಡಿದ್ವಿ ಹಂಗೆ ಒಂದಿಷ್ಟು ಫೋಟೋಸ್ ತಗೊಂಡು ಮುಂದೆ ಸಾಗಿದೆವು..

ಸೂರ್ಯೋದಯ



ಕೊರಟಗೆರೆಯಲ್ಲಿ ಸರ್ಕಲ್ ನಲ್ಲಿ ಇರೋ ಒಂದು ಹೋಟೆಲ್ನಲ್ಲಿ ನಾಸ್ಟ ಮಾಡಿದ್ವಿ ... 
ಈ ಹೋಟೆಲ್ ಬಗ್ಗೆ ಒಂದೆರಡು ಮಾತು ಜಾಸ್ತೀನೇ ಹೇಳ್ಬೇಕು ಕಣ್ರೀ.. ಯಾಕಂದ್ರೆ ಚಿಕ್ಕದಾದರು ಚೊಕ್ಕ ಮತ್ತು ಒಳ್ಳೆ ಸವಿರುಚಿಯಾದ ರೈಸ್ ಬಾತ್ ಮತ್ತು ತಟ್ಟೆ ಇಡ್ಲಿ ಸಿಗುತ್ತೆ ... ಇದೆಲ್ಲ ಸಿಗೋದು ಅದು ತುಂಬಾ ಕಡಿಮೆ ಬೆಲೆಗೆ ...  ನೀವು ಕೂಡ ಈ ಮಾರ್ಗವಾಗಿ ಹೋದ್ರೆ ಈ ಹೋಟೆಲ್ನಲ್ಲಿ ನಾಸ್ಟ/ಊಟ ಮಾಡೋದನ್ನ ಮಾತ್ರ ಮರಿಬೇಡ್ರಿ... 
ಎಲ್ಲರೂ  ಹೊಟ್ಟೆ ತುಂಬಾ ನಾಸ್ಟ ಮಾಡಿದ್ವಿ... ಹೊಟ್ಟೆಗೆ ಇಂಧನ (fuel) ತುಂಬಿದ ಹಾಗಾಯ್ತು ನೋಡ್ರಿ..  ಅಲ್ಲಿಂದ ಮುಂದೆ ಸಾಗಿ ಬೆಳಿಗ್ಗೆ 8ಕ್ಕೆ ಮಧುಗಿರಿ ಮುಟ್ಟಿದೆವು... 

ಬೈಕ್ ಗಳನ್ನ  ಅಲ್ಲೇ ದೊಡ್ಡ ಮರದ ಕೆಳಗೆ ಪಾರ್ಕ್ ಮಾಡಿ ರೆಡಿ ಆದ್ವಿ ನೋಡ್ರಿ ಟ್ರೆಕ್ಕಿಂಗ್ ಮಾಡೋಕೆ.. ಟ್ರೆಕ್ಕಿಂಗ್  ಶುರು ಮಾಡೋದಕ್ಕೂ ಮೊದ್ಲೇ ಚೈತನ್ಯ ಹೇಳಿದ ಈ ಟ್ರೆಕ್ಕಿಂಗ್ ನಲ್ಲಿ ತುಂಬಾ ಟ್ವಿಸ್ಟ್ ಮತ್ತು surprises ಇವೆ ಅಂತ...
"HAMLA  KAROO" ಅನ್ನೋ ಜಯಗೋಸ್ಟಿಯೊಂದಿಗೆ ಬೆಳಿಗ್ಗೆ 8. 15ಕ್ಕೆ ಟ್ರೆಕ್ಕಿಂಗ್  ಚಾಲು ಮಾಡಿದ್ವಿ ನಮ್ಮ ಈ ಟ್ರೆಕಿಂಗ್ ಯುದ್ದ...
ಜಬರ್ದಸ್ತ್  ನಾಸ್ಟ ಮಾಡಿರಿ ನಡೀರಿನ್ನ ಟ್ರೆಕ್ಕಿಂಗ್ ಯುದ್ದಕ್ಕೆ 

ನಿಜ ಹೇಳ್ಬೇಕು ಅಂದ್ರೆ ಮಧುಗಿರಿ ಬೆಟ್ಟ, ಇದೊಂದು ಬೃಹದಾಕಾರದ ಕಲ್ಲು ಬಂಡೆ. ಕೆಳಗಡೆಯಿಂದ ನಿಂತು ನೋಡಿದ್ರೆ ಒಂದು ದೊಡ್ಡ ಕಲ್ಲು ಬಂಡೆ  ಅದನ್ನು ಶಿಲ್ಪಕಲೆಗಾರ ವರ್ಣರಂಜಿತವಾಗಿ ಕೆತ್ತಿದ್ದಾನೆ ಅನ್ಸುತ್ತೆ. ಮುಖ್ಯ ದ್ವಾರದ ಹತ್ತಿರ ಒಂದಿಷ್ಟು ಫೋಟೋಸ್ ತಗೊಂಡು ಮುಂದೆ ಸಾಗಿದ್ವಿ.
ಆವಾಗಲೇ ಸುಡುಬಿಸಿಲು ತನ್ನ ಪ್ರಭಾವ ಬೀರುತ್ತಿತ್ತು . ಆದರೆ ಚೈತನ್ಯರವರ ಮುಂದಾಳತ್ವ, ಕೊರಟಗೆರೆ ನಾಸ್ಟದ ಎನರ್ಜಿ ಮತ್ತು ನಮ್ಮಲ್ಲಿರೋ ಈ ಬೆಟ್ಟಾನ ಆಕ್ರಮಣ ಮಾಡಬೇಕೆಂಬ ಹುಮ್ಮಸ್ಸು ಆ ಬಿಸಿಲಿನ ಪ್ರಭಾವಕ್ಕೊಳಗಾಗದೆ ಮುಂದೆ ಹೊರಟಿತು ನಮ್ಮ ಟ್ರೆಕ್ಕಿಂಗ್  ಯುದ್ದ.
ಸ್ವಲ್ಪ  ಮುಂದೆ ಹೋದ್ರೆ ಅಲ್ಲೊಂದು ಕಲ್ಲು ಬಂಡೆ ತುದಿಗಾಲಲ್ಲಿ ನೆಲ ನೋಡುತ ನಿಂತಿತ್ತು... ನಾವು ಅದರ ಕೆಳಗೆ ನಿಂತು ಏನು ನಾವೇ ಅದನ್ನ ತಳ್ಳಿದ್ವಿ ಅನ್ನೋ ಹಾಗೆ ಪೋಸ್ ಕೊಟ್ವಿ... ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನ ಧೈತ್ಯ ಗುರು  ಹಾಗೆ ಹಿಡಿದು ನಿಲ್ಲಿಸೋಕೆ ಪ್ರಯತ್ನಿಸಿದ ಹಾಗೆ ಪೋಸ್ ಕೊಟ್ರು..:) ಇನ್ನು ಕೆಲವರು ಇನ್ನೆರಡು ಹೆಜ್ಜೆ ಮುಂದೆ ಹೋಗಿ ಘಟದ್ಗಜನ(ಘಟೋದ್ಗಜನ) ಹಾಗೆ ಕಿರು ಬೆರಳಲ್ಲಿ ಆ ಬೃಹದಾಕಾರದ ಬಂಡೆನ ಅಲುಗಾಡಿಸಿದ್ರು...
ಅಲ್ಲಿಂದ ಇನ್ನು ಸ್ವಲ್ಪ ಮುಂದೆ ಸಾಗಿದರೆ ಅಲ್ಲೊಂದು ಕಮಾನ್ ಇದೆ ( ಬಿಜಾಪುರದಲ್ಲಿ ಬಾರಾ ಕಮಾನ್ ಇರೋ ಹಾಗೆ). ಅದರ ಮೇಲೆ ಒಂದೊಂದು ಕಂಬದ ಮೇಲೆ ಒಬ್ಬೊಬ್ಬರು ನಿಂತು ಪೋಟೋಗೆ ಪೋಸ್ ಕೊಟ್ವಿ... 
ಅದೇನೋ ನಾ ಕಾಣೆ ಹರೀಶ್ ಮಾತ್ರ ಆ ಕಂಬಗಳ ಮೇಲೆ ಬರಲು ತುಂಬಾ ಹೆದರಿದ ಮತ್ತು ಆ ಕಂಬಗಳನ್ನು ನೋಡಿದ್ರೆ ಹರಿಶನ ಹಾವ ಭಾವದಲ್ಲಿ ತುಂಬಾ ಬದಲಾವಣೆಗಳು ಕಾಣಿಸಿದವು..!!!!!!!!!!... ನನಗನಿಸುತ್ತೆ ಹಿಂದಿನ ಜನ್ಮದಲ್ಲಿ ಅವ್ನು ಬಳ್ಳಾರಿ ರಾಜನಾಗಿದ್ದ ಮತ್ತು ಅವ್ನು ಈ ಮಧುಗಿರಿ ರಾಜನ ಮೇಲೆ ಆಕ್ರಮಣ ಮಾಡಿದಾಗ ಇದೆ ಜಾಗದಲ್ಲಿ ಏನೋ ಅವಾಂತರ ನಡೆದಿರಬೇಕು .. ( ಇದರ ಬಗ್ಗೆ ಸವಿಸ್ತಾರವಾಗಿ ಮತ್ತೊಮ್ಮೆ ಮಾತಾಡೋಣ..:).. )



ಅಲ್ಲಿಂದ ಮತ್ತೆ ಸ್ವಲ್ಪ ಮುಂದೆ ಹೋದ್ರೆ ವಾಚ್ ಟವರ್ ಸಿಗುತ್ತೆ.. ಅಲ್ಲಿಂದ ನೀವು ಮಧುಗಿರಿ ನಗರವನ್ನು ನೋಡಿದ್ರೆ ಮಧುಗಿರಿ ತುಂಬಾ ಚೆನ್ನಾಗಿ ಕಾಣಿಸುತ್ತೆ... ಅಲ್ಲಿ ಮತ್ತೆ ಫೋಟೋಸ್ ಗೆ ಪೋಸ್ ಕೊಟ್ಟು ವಾಚ್ ಟವರ್ ಇಂದ ಕೆಳಗೆ ಇಳಿದು ಬರಬೇಕು ಅಂದ್ರೆ ಅಲ್ಲೊಂದು ಕಂಬಿ ಇತ್ತು ಅದರ ಮೇಲೆ ಕುಳಿತು ನಾವು ಮೂರು ಮಂಗಗಳಂತೆ ಪೋಸ್ ಕೊಟ್ವಿ... ಆಮೇಲೆ ಕ್ಯಾಮೆರಾದಲ್ಲಿ ನೋಡಿದ್ರೆ ವಿಸ್ಮಯ ಕಾದಿತ್ತು ರೀ... ಅದು ಮೂರು ಮಂಗಗಳ ಕಥೆ ಅಲ್ಲ ಆಧುನಿಕ ಜಮಾನದ ನಾಲ್ಕನೆಯ ಮಂಗ ಕೂಡ ಹಿಂದಗಡೆಯಿಂದ ಪೋಸ್ ಕೊಟ್ಟಿತ್ತು...!!!!! ನಾಲ್ಕನೆಯ ಮಂಗ ಹೇಗೆ ಪೋಸ್ ಕೊಟ್ಟಿತ್ತು ಅಂತ ಹೇಳೋದು ಸ್ವಲ್ಪ ಕಷ್ಟ ಯಾಕಂದ್ರೆ ಸೆನ್ಸಾರ್ ಕಟ್...:) ಅದರ ಊಹೆಯನ್ನು ನಿಮಗೆ ಬಿಟ್ಟಿದಿನಿ.. ನೀವು ಊಹಿಸಿಕೊಳ್ಳಿ.....

ವಾಚ್ ಟವರ್

ಹಾಗೆ ನಗೆ ಚಟಾಕಿಗಳನ್ನು ಹಾರಿಸುತ ಮುಂದೆ ಸಾಗಿತು ನಮ್ಮ ಟ್ರೆಕ್ಕಿಂಗ್ ಆಕ್ರಮಣ...  ಅದು ಒಂದೇ ಕಲ್ಲಿನ ಬೆಟ್ಟವಾದ್ರಿಂದ ಹತ್ತಲು ಒಂದು ವಿಶೇಷವಾದ ಬೆಟ್ಟವೆನಿಸ್ತಿತ್ತು.. ನಮ್ಮ ಟ್ರೆಕ್ಕಿಂಗ್  ಸಾಗುತಿರಬೇಕಾದ್ರೆ ಒಂದು surprise ಬಂತು ನೋಡ್ರಿ ಅದೇ ಆ ದಾರಿ ಹೇಗಿತ್ತು ಅಂದ್ರೆ ವಾಲಿಕೊಂಡು ಸುಮಾರು 70 -80  ಡಿಗ್ರೀ  ಇಳಿಜಾರಿಗೆ ಅಭಿಮುಖವಾಗಿ ಬೆಟ್ಟ ಹತ್ತಬೇಕಿತ್ತು... ಅದುನ್ನ ನೆನಿಸ್ಕೊಂದ್ರೆ ನಂಗೆ ನಮ್ಮ ಕನ್ನಡ ಹೀರೋ ಅಂಬರೀಶ್ ಓಡೋ ನೆನಪು ಬರುತ್ತೆ... ನೀವೇನಾದ್ರು ಅಂಬರೀಶ್ ಮೂವಿ ನೋಡಿದಿದ್ರೆ ಈ ವಾಲಿಕೊಂಡು ನಡಿಯೋ ಸ್ಟೈಲ್ ತುಂಬಾ ಸಲೀಸಾಗಿ ನಿಭಾಯಿಸ್ತೀರ .. ನೀವೇನಾದ್ರು ಮಳೆಗಾಲ ಅಥವಾ ಮಂಜು ಬೀಳೋ ಸಮಯದಲ್ಲಿ ಇಲ್ಲಿಗೆ ಬಂದರೆ ಈ ಬೆಟ್ಟ ಹತ್ತೊಕಾಗೋದಿಲ್ಲ ಅನ್ಸುತ್ತೆ . 
ಆದರೆ  ಕಬ್ಬಿಣದ rail ಮಾಡಿರೋದ್ರಿಂದ ಆಸರೆಗೆ ಹಿಡಿಗುಕೊಂಡು ಬೆಟ್ಟ ಹತ್ತಬೇಕು... ಅಲ್ಲಿಂದ ಅರಿತು ಮರೆತು ಕೆಳಗೆ ನೋಡಿದರೆ, ಆ ಆಳ ನೋಡಿ ಜೀವ ಕೈಯಲ್ಲಿ ಬಂದಂಗಾಗುತ್ತೆ.. 
ಇದರ ಮದ್ಯ ನಮ್ಮ ಮೇಲೆ ಸೂರ್ಯನ ಉರಿ ಬಿಸಿಲಿನ ಕಿರಣಗಳ ಆರ್ಭಟ ಜಾಸ್ತಿ ಆಗಿತ್ತು.. ಆದರ ಅದರ ಪರಿಣಾಮ ನಮಗೆ ಅಷ್ಟೊಂದು ಆಗಲಿಲ್ಲ ಯಾಕೆ ಗೊತ್ತೇ?  
ವಾಯು ಪುತ್ರ ನಮ್ಮ ಸಪೋರ್ಟ್ ಗೆ ನಿಂತು ತಂಪಾದ ಗಾಳಿ ಬೀಸುತಿದ್ದ, ಆ ತಂಗಾಳಿಯಲಿ ನಾವು ಬೆಂದಿರೋದನ್ನ  ನೋಡಿ ಆ ಸೂರ್ಯದೇವನು ಕೂಡ ಮನಸೋತು ಹೋಗಿದ್ದನೇನೋ ಅನ್ಸುತ್ತೆ...:)

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ
ಕಹಾನಿ ಮೇ ಟ್ವಿಸ್ಟ್:-
ಅಲ್ಲಿಂದ ಸ್ವಲ್ಪ ಮುಂದೆ ಹೋದ್ರೆ ಹೋ ಕೊನೆಗೂ ಕಷ್ಟಪಟ್ಟು ಬೆಟ್ಟ ಹತ್ತಿದ್ವಿ ಅಂತ ಎಲ್ಲರೂ ಕುಣಿದಾಡಲು ಶುರು ಮಾಡಿದ್ರು... ಅಲ್ಲೇ ಟ್ವಿಸ್ಟ್ ಬಂತು ನೋಡ್ರಿ actually  ಅದು ಬೆಟ್ಟದ ತುದಿ ಆಗಿರಲಿಲ್ಲ.. ಆದರ ಅದು ನೋಡೋದಕ್ಕೆ ಬೆಟ್ಟದ ತುದಿಯಾಗಿದೆ ಅನ್ಸುತ್ತೆ... ಚೈತನ್ಯ ಹೇಳಿದ ಇದು ಬರಿ ಅರ್ಧ ಆಕ್ರಮಿಸಿದ್ದೇವೆ... ಇನ್ನೂ ಅರ್ಧ ಕ್ರಮಿಸಬೇಕು... ಎಲ್ಲರೂ ಒಂದೇ ಹೊಡೆತಕ್ಕೆ  silent.... 
ಇಷ್ಟೊಂದು ಹತ್ತಿದ್ದೇವೆ ಅದೆಷ್ಟು ಇದೆ ನೋಡಿಯೇ ಬಿಡೋಣ ಅಂತ ಸ್ವಲ್ಪ snaps  ತಗೊಂಡು ಮತ್ತೆ ಬೆಟ್ಟ ಹತ್ತಲು ಶುರು ಮಾಡಿದ್ವಿ...  
ಬೆಟ್ಟದ ಮೇಲೆ ಹೋಗಬೇಕು ಅಂದರೆ ನೀವು 11 ಗೋಡೆಗಳನ್ನ ದಾಟಬೇಕು..  ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಇನ್ನೊಂದು surprise  ಕಾದಿತ್ತು ಅದೇನು ಗೊತ್ತಾ? 
ಅದೇನಂದರೆ   ಅದೊಂದು ಇಳಿಜಾರಿನ ಪ್ರದೇಶ ಅಲ್ಲಿ ಹತ್ತಬೇಕು ಅಂದರೆ ಅಲ್ಲಿ ಮೆಟ್ಟಿಲುಗಳಿಲ್ಲ ಮತ್ತು support  ಹಿಡಿಯೋದಕ್ಕೆ ಏನೂ ಇಲ್ಲ... ಅಪ್ಪಿ ತಪ್ಪಿ ಕಾಲು ಜಾರಿದರೆ or balance  ತಪ್ಪಿದರೆ ನೇರವಾಗಿ ಬೇರೆ ಲೋಕಕ್ಕೆ ಪಯಣ......!!!!!
ಈ ಬೆಟ್ಟ ಹತ್ತಲು ಹರಿಶನ್ನ ಸ್ಮರಿಸಲೇ ಬೇಕು ಯಾಕೆ ಗೊತ್ತ.. ಅವನು ಹೊಸ ಟ್ರೆಕ್ಕಿಂಗ್ ವಿಧಾನವನ್ನ ಕಂಡುಹಿಡಿದಿದ್ದ .. ಅದೇನಂದರೆ ಆಮೆ ಥರ ಹೊಟ್ಟೆ ಸವೆದುಕೊಂಡು ಬೆಟ್ಟ ಹತ್ತೋದು...:) 

Balance ಮಿಸ್ ಆದ್ರೆ ನೇರವಾಗಿ ಬೇರೆ ಲೋಕಕ್ಕೆ ಪಯಣ

Balance ಮಿಸ್ ಆದ್ರೆ ನೇರವಾಗಿ ಬೇರೆ ಲೋಕಕ್ಕೆ ಪಯಣ

ಅಂತು ಇಂತೂ ಹರಸಾಹಸ ಮಾಡಿ ಹನ್ನೊಂದು ಗೋಡೆಗಳನ್ನ ಆಕ್ರಮಣ ಮಾಡಿ ನಮ್ಮ ಹತೋಟಿಗೆ ತಗೆದುಕೊಂಡಿದ್ವಿ...:)
ಕೊನೆಗೆ ಬೆಟ್ಟ ಹತ್ತಿರೋ ಖುಷಿಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿ ಜಯದ ಜಯಕಾರಗಳನ್ನು ಹೇಳಿದರು.. ಆ ಗೆಲುವಿನ ಸಂತೋಷಕ್ಕೆ ನಮಗೆ ಆರತಿ ಮಾಡೋದೊಂದು ಬಾಕಿ ಇತ್ತು ನೋಡ್ರಿ...

ಯಾಹೂ ಕೊನೆಗೂ ನಾವೇ ಗೆದ್ವಿ 


ಬೆಟ್ಟದ ಮೇಲೆ ಗೋಪಾಲಸ್ವಾಮಿ ಗುಡಿ ಇದೆ... ಆದರೆ ಅಲ್ಲಿ ಯಾರು ಕಾಳಜಿ ವಹಿಸದ್ದರಿಂದ ಆ ಗುಡಿ ಹಾಳುಬಿದ್ದಿದೆ ... ಅಲ್ಲೇ ಒಂದು ಕಲ್ಲುಮಂಟಪವಿದೆ  ಅಲ್ಲಿ ಕುಳಿತು  ನಿಂಬೆ ಹಣ್ಣಿನ ಅಳತೆಯಷ್ಟಿರೋ ಕಿತ್ತಳೆ ಹಣ್ಣುಗಳನ್ನ  ಮತ್ತು biscuits .. cakes  ತಿಂದ್ವಿ... 
ಅಲ್ಲೇ ಸ್ವಲ್ಪ ವಿಶ್ರಾಂತಿ ತಗೊಂಡು.. ಬೆಟ್ಟದ ಮೇಲೆ full  ಸುತ್ತಾಡಿ ..ಫೋಟೋಸ್ ಗೆ ಫೋಸ್ ಕೊಟ್ಟು.. 
ಸುಮಾರು ಮದ್ಯಾನ 12 ಕ್ಕೆ ಕೆಳಗೆ ಇಳಿಯೋದಕ್ಕೆ ಶುರುಮಾಡಿ 80 ನಿಮಿಷದಲ್ಲಿ ಕೆಳಗೆ ಬಂದ್ವಿ...

ಹಂಗೆ ಒಂದು ಪೋಸ್
 ಅಲ್ಲಿಂದ ಹೊರಟು ಕೊರಟಗೆರೆ ಗೆ ಬಂದು ಒಂದು ಅಂಗಡಿಯಲ್ಲಿ ಸ್ವೀಟ್ ಲೈಮ್ ಸೋಡಾ, ಮಸಾಲಾ ಸೋಡಾ, ಕೂಲ್ಡ್ರಿಂಕ್ಸ್  ಕುಡಿದು ಸ್ವಲ್ಪ ವಿಶ್ರಮಿಸಿ ಬೆಂಗಳೂರಿಗೆ ಸುಮಾರು ಸಾಯಂಕಾಲ 4ಕ್ಕೆ ಬಂದು ತಲುಪಿದ್ವಿ..  
ಆಯಾಸವಾದರೂ ಈ ಟ್ರೆಕ್ಕಿಂಗ್  ಯಶಶ್ವಿಯಾದ್ದರಿಂದ ಎಲ್ಲರ ಮುಖದಲ್ಲಿ ಆ ಆಯಾಸ ಕಾಣಿಸಲಿಲ್ಲ... 
ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿ.. ತಮ್ಮ ತಮ್ಮ ಮನೆಗೆ ಮರಳಿದರು... 

ಕೃತಜ್ಞತೆಗಳು:-
ಚೈತನ್ಯಕುಮಾರ್  ಎ   ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ  ಗೆಳೆಯರಾದ (ಸಹ ಚಾರಣಿಗರಾದ  ಚೈತನ್ಯಕುಮಾರ್, ಹರೀಶ್, ಸಂತೋಷ್, ಆಧಾರ್, ಗೌತಮ್ ಮತ್ತು ಚನ್ನ ... 



....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....





Thursday, 25 April 2013

ಕಾಮತ್ ಖಾನ ಖಜಾನಾ................... Heaven for Foodies (One Day Trip to Kamat Lokaruchi, Janapada Loka and Kanva Reservior)... 2nd October 2011


ಪ್ಲಾನ್ ಕೆ ಮುತಾಬಿಕ್ ಚಂದ್ರಾ ಬಡಾವಣೆಯಲ್ಲಿರುವ ಅಮೀನ್ ರೂಮಿಂದ ಬೆಳಿಗ್ಗೆ 6:30ಕ್ಕೆ  ಎಲ್ಲರೂ ಬೆಂಗಳೂರು ವಿಶ್ವವಿದ್ಯಾಲಯದ ಮಾರ್ಗವಾಗಿ ಹೊರೆಟೆವು...  ವಿಶ್ವವಿದ್ಯಾಲಯದಲ್ಲಿ  ಚಿಕ್ಕ ಕಾಡು ಕಾಣಿಸಿತು.. ಅದೇನೋ ರೀ ಪಾ ನಮ್ ಬೆಂಗಳೂರಿನಲ್ಲಿರೋ ಜನರಿಗೆ ಸ್ವಲ್ಪ ಹಸಿರು ಅಥವ ಕಾಡು ಕಾಣಿಸಿದರೆ ಜೀವನದಲ್ಲಿ ಏನೋ  ಪಡೆದಂತೆ ಮನಸ್ಸಿಗೆ ಆನಂದ ಮತ್ತು ಹುಮ್ಮಸ್ಸು ಪಾಪ ಅವರೇನು ಮಾಡ್ತಾರೆ ಹೇಳ್ರಿ ಮುಂಜಾನೆದ್ದು ಸಾಯಂಕಾಲದವರೆಗೆ ಆ ಆಫೀಸು ಆ ಮಲಿನವಾಗಿರೋ ಗಾಳಿ ಆ  ಪಕ್ಕದಮನೆಲಿ ಇದ್ದರು ಒಬ್ಬರಿಗೊಬ್ಬರು ಯಾರು ಅಂತಾನೆ ಗೊತಿಲ್ದೆ ಇರೋ ಆ ಜನ,  ಜಂಗುಳಿಯಿಂದ ಕೂಡಿರೋ  ಜೀವನ, ಇದೆಲ್ಲದರ ನಡುವೆ ಅತ್ತ ನಮ್ಮೂರಿಗೂ ಹೊಗೂದಕಾಗದೆ ಇತ್ತ ಬೆಂಗಳೂರು ಬಿಡೋಕಾಗದೆ ಚಡಪಡಿಸುತ್ತಿರೋ ಯಾರೂ ಕರುಣೆ ತೋರಿಸದ ಬಡಪಾಯಿಗಳು .....  ಬೆಳಗಿನಜಾವ ಚಿಕ್ಕ ಕಾಡಾದರೂ ಚುಮು ಚುಮು ಚಳಿಯಲಿ ಸ್ವಲ್ಪ ಮಂಜು ಕವಿದ ವಾತಾವರಣ ಇರೋದ್ರಿಂದ ಬಾಳ ಚಂದ ಕಾಣಿಸ್ತಿತ್ತು.. ಹಾಗೆ ಒಂದೆರಡು ಗ್ರೂಪ್ ಫೋಟೋಸ್ ತಗೊಂಡು ಮತ್ತೆ ಕೆಂಗೇರಿ ಮಾರ್ಗವಾಗಿ ಕಾಮತ್ ಲೋಕರುಚಿ ಕಡೆಗೆ ಸಾಗಿತು ನಮ್ಮ ಬೈಕ್ ಸವಾರಿ..... 

ಬೆಂಗಳೂರಿ ವಿಶ್ವವಿದ್ಯಾಲಯದ ಕಾಡಲ್ಲಿ 

ಬೆಂಗಳೂರಿ ವಿಶ್ವವಿದ್ಯಾಲಯದ ಕಾಡಲ್ಲಿ 


ಬೆಂಗಳೂರು ಮೈಸೂರು ಮಾರ್ಗಮದ್ಯ (ಸ್ವಲ್ಪ ಗಮನಿಸಿ ಇವರು Woodland brand  ambassadors ಅನ್ಕೊಂಡ್ರ ಹೆಂಗೆ)



ನಾನು ಗಿರೀಶ್ ಬೈಕ್ ಮೇಲೆ ಕುಳಿತಿದ್ದೆ.. ಕೆಂಗೇರಿ ದಾಟಿದ್ದೆ ತಡ ಗಿರೀಶ್ ಬೈಕ್ ಸ್ಕಿಡ್ಡಿಂಗ್ ಶುರು ಮಾಡಿದ ನೋಡ್ರಿ ನಂಗೆ ಗೊತಿಲ್ದೆ ರಪ್ಪ್ ಅಂತ ಯಾವದೋ ಲೋಕಕ್ಕೆ ಹೋಗಿ ಬಂದಂಗೆ ಭಾಸವಾಯ್ತು.. ಬೈಕ್ ರೈಡ್ ಮಾಡೋರಿಗೆ  ಅದು ತುಂಬಾ ಮಾಮೂಲು ಅನ್ಸುತ್ತೆ  ರೀ ಆದ್ರೆ ಹಿಂದಗಡೆ ಕುಳಿತವರಿಗೆ  ಗೊತ್ತು ಅದರ ಭಯ... ಹಂಗೆ ಹಿಂಗೆ ಕಾಮತ್  ಲೋಕರುಚಿಗೆ ಬೆಳಿಗ್ಗೆ 7:15 ಕ್ಕೆ  ಬಂದು ಮುಟ್ಟಿದೆವು.. 
ಹಾ ಕಾಮತ್ ಬಗ್ಗೆ ಹೇಳೋದೇ ಮರ್ತಿದ್ದೆ, ಇದು ಬುಫ್ಫೆಟ್ ಸಿಸ್ಟಮ್ ಬ್ರೇಕ್ಫಾಸ್ಟ್ ಗೆ (buffet system breakfast) ತುಂಬಾ ಪ್ರಸಿದ್ದಿ ಪಡೆದಿರೋ ಹೋಟೆಲ್.. ರೂ 100/ ಕೊಟ್ಟರೆ ಹೊಟ್ಟೆ ತುಂಬಾ ವಿದವಿಧವಾದ ತಿಂಡಿಗಳನ್ನು ತಿನ್ನಬಹುದು.. ಅದರಲ್ಲಿ ಕೆಲವೊಂದು ಹೆಸರಿಸಬೇಕಂದ್ರೆ , ಬಾಳೆ ಎಲೆಯಲ್ಲಿ ಸುತ್ತಿ ಮಾಡಿರೋ ಚಿಕ್ಕ ಚಿಕ್ಕ ಇಡ್ಲಿ, ಸಣ್ಣ ಸಣ್ಣ ಸೆಟ್ ಮತ್ತು  ಮಸಾಲೆ ದೋಸೆ, ಉಪ್ಪಿಟ್ಟ್, ಸಿರಾ, ಜಿಲೇಬಿ, ಹಣ್ಣಿನ ರಸ(fruit  juice)  ಇತ್ಯಾದಿ ಇತ್ಯಾದಿ..  
ಮತ್ತೊಂದು ವಿಷಯ ಈ ಬುಫ್ಫೆಟ್ ಸಿಸ್ಟಮ್ ಬ್ರೇಕ್ಫಾಸ್ಟ್ ಸಿಗೋದು ಬೆಳಿಗ್ಗೆ 7 ರಿಂದ  ಬೆಳಿಗ್ಗೆ 10 ರವರೆಗೆ ಮಾತ್ರ..:)
ಮಸ್ತ್ ನಾಸ್ಟ ಮಾಡಿ ಪಕ್ಕದಲ್ಲೇ ಇರೋ ಜನಪದ ಲೋಕ ವಸ್ತು ಸಂಗ್ರಾಲಯಕ್ಕೆ ಭೇಟಿ ಕೊಟ್ವಿ.. 

ಕಾಮತ್ ಲೋಕರುಚಿ

ಖಾನ ಬಜಾನ

ಖಾನ ಬಜಾನ

ಖಾನ ಬಜಾನ

ಖಾನ ಬಜಾನ

ಖಾನ ಬಜಾನ

ಜನಪದ ಲೋಕ:-

ಜನಪದ ಲೋಕ ಅಂದ್ರೆ ಹೆಸರು ಹೇಳೂ ಹಾಗೆ  ಇದೊಂದು  ಪ್ರಾಚೀನ ಕಾಲದ ಜನರ ಉಡುಗೆ ತೊಡುಗೆ ಮತ್ತು ಜೀವನ ಶೈಲಿಯನ್ನು ಬಿಂಬಿಸೋ ಒಂದು ಚಿಕ್ಕದಾದರು ಚೊಕ್ಕ ಮತ್ತು ಮನಸೆಳೆಯೋ  ವಸ್ತು ಸಂಗ್ರಾಲಯ... 

ವಸ್ತು ಸಂಗ್ರಾಲಯವನ್ನು ನೋಡುತಾ ಹಾಗೆ ಒಂದಿಸ್ಟು  ಫೋಟೊಗಳನ್ನ ತಗೆದುಕೊಂಡು.. ಅದೇ ವಸ್ತು ಸಂಗ್ರಾಲಯದಲ್ಲಿ ಒಂದು ಚಿಕ್ಕ ಕೆರೆ ಇದೆ ಅಲ್ಲಿ ಬೋಟಿಂಗ್ ವ್ಯವಸ್ತೆ ಕೂಡ ಇದೆ, ಬೋಟಿಂಗ್ ಚಾರ್ಜ್ ಒಬ್ಬರಿಗೆ ರೂ 5/, ಅದು ಬರಿ ಬೆಂಗಳೂರಿನ ಒಂದು ಹಾಫ್ ಕಾಫಿ/ಟೀ ಬೆಲೆ ಅಂದ್ರೆ ಒಬ್ಬರಿಗೆ ರೂ 5/ ಮಾತ್ರ...:)
ಎಲ್ಲರೂ ನಾ ಮುಂದ ತಾ ಮುಂದೆ ಅಂತ ಬೋಟಿಂಗ್ ಮಾಡಿದ್ದೆ ಮಾಡಿದ್ದು.. ಅಲ್ಲೇ ಗಾರ್ಡೆನ್ ಅಲ್ಲಿ ಸುತ್ತಾಡಿ ಕೆರೆ ಪಕ್ಕ ಮತ್ತೆ ಫೋಟೋಸ್ ತಕ್ಕೊಂಡು.. ಕಣ್ವ ಅಣೆಕಟ್ಟಿಗೆ ( Kanva Dam) ಹೊರಟೆವು... 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 


ಜನಪದ ಲೋಕ 

ಜನಪದ ಲೋಕ 

ಜನಪದ ಲೋಕ 



ಜನಪದ ಲೋಕ 



ಜನಪದ ಲೋಕ 



ಜನಪದ ಲೋಕ 

ಜನಪದ ಲೋಕ 


ಜನಪದ ಲೋಕ 


ಕಣ್ವ ಆಣೆಕಟ್ಟು:- 
ರಾಮನಗರದಿಂದ ಸ್ವಲ್ಪ ದೂರದಲ್ಲಿರೋ ಕಾವೇರಿ ನದಿಗೆ ಕಟ್ಟಿರೋ ಚಿಕ್ಕ ಆಣೆಕಟ್ಟು.. ಈ ಭಾಗದಲ್ಲಿರೋ ಭೂಮಿಯನ್ನ ನೀರಾವರಿಗೆ ಪರಿವರ್ತಿಸಲು ಕಟ್ಟಿರೋ ಆಣೆಕಟ್ಟು.. ನಾ  ಇದರ ಬಗ್ಗೆ ಹೇಳಾಕ್ ಹೊಗಾಂಗಿಲ್ಲ.. ಗೂಗಲ್ ಅಲ್ಲಿ ತುಂಬಾ ಚೆನ್ನಗಿನೆ ವಿವರಿಸಿದ್ದಾರೆ... 
ಸುಮಾರು ಮದ್ಯಾನ 12 ಕ್ಕೆ ನಾವೆಲ್ಲರೂ ಆಣೆಕಟ್ಟು ತಲುಪಿದ್ವಿ... 
ಡ್ಯಾಮ್ ನೋಡಿ ಅಲ್ಲಿ ಹಿನ್ನೀರಿನಲ್ಲಿ ಹೋಗಿ ಸ್ನಾನ/ಈಜಾಡೋಕೆ ರೆಡಿ ಆದ್ವಿ ನೋಡ್ರಿ.. ಹಂಗೆ ಅಲ್ಲಿ ಯಾವ್  ಯಾವ್ ಆಡಿದ್ವಿ ಅಂತ ಹೇಳಬಾರದು. ನೀರು ಕಡಿಮೆ ಇರೋದ್ರಿಂದ ಈಜು ಬರದೆ ಇರೋರು ಕೂಡ ಸ್ನಾನ ಮಾಡಿದ್ರು. ಒಟ್ಟಿನಲ್ಲಿ ಗೆಳೆಯರೆಲ್ಲರೂ ಮಸ್ತ್ ಮಜಾ ಮಾಡಿದ್ವಿ..:)


ಕಣ್ವ ಆಣೆಕಟ್ಟು

ಕಣ್ವ ಆಣೆಕಟ್ಟು

ಅಲ್ಲಿಂದ ಮದ್ಯಾನ 2:30 ಸುಮಾರಿಗೆ ಬೆಂಗಳೂರಿನ ಕಡೆಗೆ ಸಾಗಿತು ನಮ್ಮ ಬೈಕ್ ಪ್ರಯಾಣ...ದಾರಿಯಲ್ಲಿ ಬರೋವಾಗ ಮರ್ಗಮದ್ಯ ಸುಂದರವಾದ ಪ್ರಕೃತಿಯ ಸೌಂದರ್ಯ ನಮ್ಮನ್ನು ಕೈ ಬೀಸಿ ಈ ಪ್ರಕೃತಿಯ ಸೌಂದರ್ಯವನ್ನು ಸವಿದು ಫೋಟೋ ತಗೆದುಕೊಂಡು ಹೊಗ್ರೋ  ಅಂತ ಕರೀತಿತ್ತು . ಇಸ್ಟೊಂದು ಆಹ್ವಾನವಿತ್ತಾಗ ನಾವು ಬಿಡ್ತೀವಾ.. ಅಲ್ಲೇ ಮತ್ತೆ ಒಂದಿಸ್ಟು ಫೋಟೋಸ್ ಗೆ ಫೋಸ್ ಕೊಟ್ಟು ಒಬ್ಬರಿಗೊಬ್ಬರು ರೇಗಿಸುತ್ತಾ ಬೆಂಗಳೂರಿನ ಕೆಡೆಗೆ  ಹೊರೆಟೆವು... 






 ರಾಮನಗರ ಹತ್ತಿರ ಬಂದಾಗ ಮಳೆ ಬರೋದಕ್ಕೆ ಶುರುಮಾಡಿತು.. ಅಲ್ಲೇ ಸ್ವಲ್ಪ ಚಾವಣಿ ಕೆಳಗೆ ನಿಂತು ಮಳೆ ಕಡಿಮೆಯಾದ ಮೇಲೆ ಹೊರಟು ಸಾಯಂಕಾಲ 5:00 ಕ್ಕೆ ಬೆಂಗಳೂರಿಗೆ ಸೇರಿದ್ವಿ... 
ಮೈಸೂರು ರಸ್ತೆಯಲ್ಲಿರೋ ಗೋಪಾಲನ್ ಆರ್ಕೆಡ್ ಗೆ(Gopalan Arcade Cinemas) ಹೋಗಿ KFC ಅಲ್ಲಿ ಸಾಯಂಕಾಲದ ಉಪಹಾರ ಸೇವಿಸಿ... ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿ ಅಲ್ಲಿಂದ ಮತ್ತೆ ಅದೇ ಬೆಂಗಳೂರಿನ ಅಲೆಮಾರಿಯಂತ ಜೀವನಕ್ಕೆ ಮರಳಿದರು.... 


KFC

KFC

ಕೃತಜ್ಞತೆಗಳು:- 
ಈ ಒಂದು ದಿನದ ಪ್ರವಾಸದಲ್ಲಿ ಬಾಗವಹಿಸಿದ ,
ಅಣ್ಣರಾವ್ , ಗಿರೀಶ್, ಅಮೀನ್, ಶ್ರೀಶೈಲ್, ಕಿರಣ್, ಮಧು, ಚವಾಣ್ ಮತ್ತು ಚನ್ನ.... 

ಮಾರ್ಗ ಸೂಚಿ:- 
ಬೆಂಗಳೂರಿಂದ ಸುಮಾರು 40Km...  
ಬೆಂಗಳೂರಿಂದ ಮೈಸೂರು ಮಾರ್ಗ ಮಧ್ಯದಲ್ಲಿದೆ.. 
ರಾಮನಗರದಿಂದ ಸುಮಾರು 3km  ದೂರ ಕ್ರಮಿಸಿದರೆ ಬಲಗಡೆಗೆ  ಸಿಗುತ್ತೆ.... 
ಸಾರಿಗೆ ವ್ಯವಸ್ತೆ:- 
ರಾಮನಗರದವರೆಗೆ ಸರಕಾರಿ ಬಸ್ಸಲ್ಲಿ ಹೋಗಿ ಅಲ್ಲಿಂದ ಆಟೋದಲ್ಲಿ ಹೋಗಬಹುದು ಅಥವಾ ನಿಮ್ಮ ಸ್ವಂತ ವಾಹನದಲ್ಲಿ ಹೋಗಬಹುದು...




....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....



Wednesday, 24 April 2013

ನಿಜಗಳ್ ಬೆಟ್ಟ ಟ್ರೆಕ್ಕಿಂಗ್ - (Trek To Nijagal Betta) - April 2013

                                                         ನಿಜಗಳ್  ಬೆಟ್ಟ ಟ್ರೆಕ್ಕಿಂಗ್ 

ನಿಜಗಳ್  ಬೆಟ್ಟ


ವಿ . ಸೂ  :- 
ಇದು ನನ್ನ ಮೊದಲನೇ ಬ್ಲಾಗ್ ಆದ್ದರಿಂದ  ಏನಾದ್ರು ಬರೆಯೋದರಲ್ಲಿ ತಪ್ಪೆನಿಸಿದ್ರೆ ಹೊಟ್ಟ್ಯಾಗ  ಹಾಕೊಂಡು ಮನ್ನಿಸಿ :)

ನಿಜಗಳ್  ಬೆಟ್ಟ:-
ನಿಜಗಳ್  ಬೆಟ್ಟ ಇರೋದು ದಾಬಾಸ್ಪೆಟ್  ಇಂದ ಸ್ವಲ್ಪ ಮುಂದೆ ಅಂದರೆ  ಬೆಂಗಳೂರು ಮತ್ತು ತುಮಕೂರು  ಮಾರ್ಗ ಮದ್ಯದಲ್ಲಿ ಸಿಗುತ್ತದೆ (on the way to Tumkur from Bengaluru, NH4). ಇದರ ಬಗ್ಗೆ ನಾ ಏನು ಜಾಸ್ತಿ ಹೇಳಾಕ್ ಹೋಗಾಂಗಿಲ್ಲ  ಯಾಕಂದ್ರ ನೀವು ಆವಾಗ್ಲೆ  ಗೂಗಲ್ ಅಲ್ಲಿ ಹುಡುಕಿರ್ತೀರಿ .. 

ಟ್ರೆಕ್ಕಿಂಗ್ ವಿವರ:-
ವಾರಕ್ಕೊಂದು ಅಂತ ಟ್ರೆಕ್ಕಿಂಗ್  ಮಾಡ್ತಾನೆ  ಇದ್ದೀವಿ ... ಹಂಗೆ ಈ ವಾರ ಕೂಡ ಒಂದು ಟ್ರೆಕ್ಕಿಂಗ್  ಹೋಗೆ ಬಿಡೋಣ  ಅಂತ ಚೈತನ್ಯ ಪ್ಲ್ಯಾನ್ ಮಾಡಿಯೇ ಬಿಟ್ಟ... 

ಬೆಳಿಗ್ಗೆ 6ಕ್ಕೆ   ಯಶ್ವಂತಪುರ್  ಹತ್ತಿರ ಇರೋ ತಾಜ್ ಹೋಟೆಲ್ ಇಂದ ಹೊರಡೋದು ಅಂತ ಅಂದುಕೊಂಡಿದ್ವಿ ಆದ್ರೆ ಏನ್ ಮಾಡೋದು ಅಂತಿರಿ ಚೈತನ್ಯ ಬೈಕ್ ಮುಂಜಾನೆದ್ದೆ ಪಂಚರ್ ಆಗಬೇಕಾ?... ಬೆಂಗಳೂರಲ್ಲಿ ಮುಂಜಾನೆದ್ದು  ಯಾವ್ ಅಂಗಡಿ ತಗೆದಿರುತ್ತೆ ಅಂತೀರಿ .. ಏನಿದ್ರೂ ಅಂಗಡಿಗಳು  ತಗೆಯೋದೆ ಮುಂಜಾನೆ  10  ಘಂ  ಮೇಲೇನೆ.. ಬೈಕ್ ಪಂಚರ್ ಶಾಪ್ ಮಾಲಿಕನ ಮನೆ ಹುಡುಕಿಕೊಂಡು ಹೋಗಿ ಪಂಚರ್ ತಗೆಸ್ಕೊಂಡು ಬರೋದ್ರೊಳಗೆ  ಬೆ 6:30 ಘಂ  ಆಗಿತ್ತು .. ಹಂಗು ಹಿಂಗು ಮಾಡಿ ಎಲ್ಲರೂ  ತಾಜ್ ಹೋಟೆಲ್ ಇಂದ ಶುರು ಮಾಡಿದ್ವಿ ನೋಡ್ರಿ ಬೈಕ್ ಜರ್ನಿ ... 
ಮುಂಜಾನೆಯ ಆ ಚುಮು ಚುಮು ಚಳಿಯಲಿ ಹೈವೇ ಮೇಲೆ ಬೈಕ್  ರೈಡ್ ಮಾಡೋ ಮಜಾನೆ ಬೇರೆ .. ಆ ಅನುಭವವನ್ನು ಬೈಕ್ ಚಲಾವಣೆ  ಮಾದಿದವ್ರಿಗೇ  ಗೊತ್ತು ..
..
ಕಾಮತ್  ಹೋಟೆಲ್ 
ಬೆಳಿಗ್ಗೆ  7:1 5 ಘಂ  ಗೇ ದಾಬಾಸ್ಪೇಟೆ ತಲುಪಿದ್ವಿ ... ಅಲ್ಲಿ ಶ್ರೀದೇವಿ  ಹೋಟಲಲ್ಲಿ ಮಸ್ತ್  ಚೌ  ಚೌ ಬಾತ್  ( ನಮ್ಮೊರ ಕಡೆ ಉಪ್ಪಿಟ್ಟ್ ಮತ್ತ ಸಿರಾ  ಅಂತಿವಲ್ಲ ಅದೇ ಈ ಚೌ  ಚೌ  ಬಾತ್) ಮತ್ತು ಇಡ್ಲಿ  ತಿಂದ್ವಿ ... 
ಹೊಟ್ಟೆಗೆ ಪೌಷ್ಟಿಕ ಆಹಾರ ಸಿಕ್ಕಂಗಾತು ..  ಎಲ್ಲರೂ  ಟ್ರೆಕಿಂಗ್ ಮಾಡೋಕೆ ಎಲ್ಲಿಲ್ಲದ ಉತ್ಸಾಹದಿಂದ ತುದಿಗಾಲಲ್ಲಿ  ನಿಂತರು ..  
 ಬೈಕ್ ಪಾರ್ಕ್ ಮಾಡೋವಾಗ ನಮ್ಮ ಡ್ರಾಮಾ 


ಬೈಕ್ ಗಳನ್ನು ಅಲ್ಲೇ ಬೆಟ್ಟದ  ಹತ್ತಿರ ನಿಲ್ಲಿಸಿ ಹೋಗೋಣ  ಅಂತ ಅನ್ಕೊಂಡ್ವಿ  ಆದ್ರೆ ಏನ್ ಮಾಡೋದು ಉರಿ  ಬಿಸಿಲು ಬೇರೆ ಜಾಸ್ತಿ ಇತ್ತು .. ಅದ್ಕೆ ಬೈಕ್ ಗಳನ್ನು ಎಲ್ಲಾದ್ರು ಸ್ವಲ್ಪ ನೆರಳು ಇರೋ ಜಾಗದಲ್ಲಿ ನಿಲ್ಸಿದ್ರೆ  ಒಳ್ಳೇದು ಅಂತ  ನೆರಳಿರೋ  ಜಾಗದಲ್ಲಿ ನಿಲ್ಸೋಕೆ ಹರಸಾಹಸ ಮಾಡಿದ್ವಿ .. 
ಇಳಿಜಾರಿಗೆ  ಅಭಿಮುಖವಾಗಿ  ಮಣ್ಣಿನಿಂದ  ಕೂಡಿರೋ  ಜಾರು  ರಸ್ತೆಯಲಿ  ಹೋಗಿ ಬೈಕ್ ಗಳನ್ನು ಪಾರ್ಕ್ ಮಾಡಬೇಕಾಗಿತ್ತು. ಒಂದ್ ಸಾರಿ ಡಿಸೈಡ್  ಮಾಡಿದ್ರಿ ನಾವ್ ಬಿಡ್ತೀವ, ಬೈಕ್ ಗಳನ್ನು  ಹರಸಾಹಸ ಮಾಡಿ ನೆರಳಲ್ಲಿ ಪಾರ್ಕ್ ಮಾಡಿದ್ವಿ:)


ನಡೀರಿ ಪಾ ಟ್ರೆಕ್ಕಿಂಗ್ ಶುರು ಮಾಡೋಣ 

ಇವಾಗ  ನಮ್ಮ ಅಸಲಿ ಟ್ರೆಕ್ಕಿಂಗ್  ಚಾಲು ಆತು  ನೋಡ್ರಿ,
ಕಲ್ಲಿನಲ್ಲಿ ಕೆತ್ತಿರೋ ಹನುಮಾನ್ 


ನಮ್ಮ ಬಳ್ಳಾರಿ  ಹರೀಶ್ ರವರ ಮುಂದಾಳತ್ವದಲ್ಲಿ  ದೊಡ್ಡ ದೊಡ್ಡ ಕಲ್ಲು ಬಂಡೆ  ಹತ್ತೋದು ಮತ್ತು ಕಾಮಿಡಿ ಷೋ  ಜೊತೆಗೆ  ಸಾಗುತಿತ್ತು ನಮ್ಮ ಪಯಣ ಬೆಟ್ಟದ  ಆ ತುದಿ ಕಡೆಗೆ..
ಮಣ್ಣಿನ ಮಕ್ಕಳಾಗಿ ಆ ಮಣ್ಣಿನ ದಾರಿಯಲಿ ಸಾಗಿತು ನಮ್ಮ ಜರ್ನಿ..  ಮಾರ್ಗ ಮದ್ಯ ಹನುಮಾನ್  ಮತ್ತು ಗಣೇಶ್ ಮೂರ್ತಿಗಳನ್ನು  ಕಲ್ಲು ಬಂಡೆಗಳಲ್ಲಿ ಕೆತ್ತಿರೋದನ್ನ  ಚೆನ್ನಾಗಿ ಗಮನಿಸಬಹುದು .. ಆ ಹಿಂದಿನ  ದಿನ ರಾಮ ನವಮಿ ಆದ್ದರಿಂದ ನಾವು ಹನುಮಾನ್ ಗೆ ಜೈ ಅಂದು ನಮಸ್ಕರಿಸಿ, ಹಂಗೆ ಒಂದೆರಡು ಫೋಟೋ ತಗೆದುಕೊಂಡು ಮುಂದೆ ಏನಿದೆ ಅಂತ ಅಡ್ವೆಂಚರ್  ಮಾಡೋಕೆ ಶುರು ಮಾಡಿದ್ವಿ..


ನಿಜಗಳ್  ಬೆಟ್ಟ

 ಹಾಗೆ ಸ್ವಲ್ಪ ಮುಂದೆ ಸಾಗಿದರೆ ದರ್ಗಾ ಮತ್ತು ನೀರಿನ  ಹೊಂಡ ಸಿಗುತ್ತೆ .. ಹೊಂಡದಲ್ಲಿ  ನೀರು ತುಂಬಾ ಹಸಿರುಮಯವಾಗಿತ್ತು.. ನಾವು ಈಜಾಡೋಣ ಅನ್ನೋವಸ್ಟರಲ್ಲಿ  ನಮ್ ಬಳ್ಳಾರಿ  ಹರೀಶ್ ಹೇಳಿದ್ರು ನಾವು ಈಜಾಡಿದ್ರೆ ಬೆಂಗಳೂರಿನ ಕಾರ್ಬನ್ ಡೈಆಕ್ಸೈಡ್  ಈ ಪ್ರಕೃತಿ  ಹಸಿರಿನಲ್ಲಿ ಸೇರಿ  ಈ ನೀರು ಕೂಡ ಹಸಿರಿನಿಂದ ಬೆಂಗಳೂರು  ಟಾರ್  ರೋಡ್ ಆಗುತ್ತೆ ..!!! 


ನಿಜಗಳ್  ಬೆಟ್ಟ


ನಿಜಗಳ್  ಬೆಟ್ಟ

ನಿಜಗಳ್  ಬೆಟ್ಟ

ಫೋಟೋಗೆ ಪೋಸ್ ಕೊಟ್ಟು ಮುಂದೆ ಮಂಟಪದ ಕಡೆ ಸಾಗಿತು ನಮ್ಮ ಟ್ರೆಕ್ಕಿಂಗ್ ಈ  ಪಯಣ.

ಹರೀಶ್ ರವರ ಜಗತ್ ಪ್ರಸಿದ್ದಿ ಪಡೆದಿರುವ ಗುಡ್ಡ ಹತ್ತೋ ಸ್ಟೈಲ್ 


ಮಂಟಪ ಹತ್ತಿರ ಬಂದು ಶಿವಗಂಗೆ ಬೆಟ್ಟಾನ  ದೂರದಿಂದ ನೋಡಿದ್ರೆ ಅದು ಥೇಟ್  ಆ ಶಿವ ಲಿಂಗವೇ.


ಶಿವಗಂಗೆಯ ದೂರದ  ಒಂದು ನೋಟ 


ಮಂಟಪದ ಹತ್ತಿರ ಸ್ವಲ್ಪ ಸಮಯ ವಿಶ್ರಾಂತಿ ತಗೊಂಡು ಹಾಗೆ ಫೋಟೋಸ್ ತಗೆದುಕೊಳ್ಳೋದನ್ನ ಮಾತ್ರ ಮರಿಲಿಲ್ಲ.. ಅದಕ್ಕೆ ಸಾಕ್ಷಿಯೆಂಬಂತೆ ಈ ಫೋಟೋಸ್ ನೋಡ್ರಿ 
ಎಷ್ಟು ಒಜ್ಜಿ ಅದಿಯೋ ಮಾರಾಯ ಎತ್ತೊಕ್ಕಾಗಾವಲ್ದು  ನೋಡ್

ಇವರೇನು ಜಂಟಿ ಪೈಲ್ವಾನರು ಅನ್ಕೊಂಡ್ರ  

ನಿಜಗಳ್  ಬೆಟ್ಟ

ಕ್ರಿಶ್ ಗೈಲ್  ಐಪಿಎಲ್  ಆಟ  ನೋಡ್ಯಾರ್  ಅದ್ಕ ಇವ್ರು ನಾವೇನು ಕಮ್ಮಿ ಇಲ್ಲ ಅಂತ ತೋರ್ಸಕತ್ತರ ನೋಡ್ರಿ 

ನಿಜಗಳ್  ಬೆಟ್ಟ

ನಿಜಗಳ್  ಬೆಟ್ಟ

ಗುಲ್ಬರ್ಗದ ಭದ್ರಕಾಳಿ ಅವತಾರದಲ್ಲಿ ಸಂಗಮೇಶ 

ನಿಜಗಳ್  ಬೆಟ್ಟ

ನಿಜಗಳ್  ಬೆಟ್ಟ

ನಿಜಗಳ್  ಬೆಟ್ಟ


ಅಲ್ಲಿಂದ ಬೆಟ್ಟದ ತುದಿಕಡಗೆ ಹೋಗೋದಕ್ಕೆ ದಾರಿ ಇರ್ಲಿಲ್ಲ, ಮತ್ತೆ ಅರ್ಧ ಬೆಟ್ಟ ಇಳಿದು ಬೇರೆ ದಾರಿಯಲ್ಲಿ ಬೆಟ್ಟ ಹತ್ತಿದ್ವಿ

ನಗೆ ಚಟಾಕಿಗಳನ್ನು ಹಾರಿಸುತ್ತ ದಾರಿ ಸಾಗಿದ್ದೆ ಗೊತ್ತಾಗಲಿಲ್ಲ .. ನೋಡಿದ್ರೆ ಆಗಲೇ ನಾವು ಬೆಟ್ಟ ಹತ್ತಿದ್ವಿ:)

ಬೇಸಿಗೆ ಇದ್ದರೂ ತಣ್ಣಗೆ ಬೀಸುವ ಆ ತಣ್ಣನೆ ಗಾಳಿಯಲಿ ನಿಂತು ಆ ಪ್ರಕೃತಿಯ ಸೌಂದರ್ಯವನ್ನು ಸವಿಯುವದೇ ಒಂದು ಮನಸ್ಸಿಗೆ ಕೊಡೂ ತೃಪ್ತಿ.. 
ಆ ಅನುಭವ ಹೇಗಿರುಥೆ ಅಂದ್ರೆ ಬೇಸಿಗೆಯಲಿ ಮಳೆ ಬಂದಾಗ ಭೂದೇವಿ ಮಡಿಲಿಂದ ಬರೋ ಆ ಸುಗಂದ ವಾಸನೆಗೂ ಮೀರಿರುತ್ತೆ ಆ ಅನುಭವ 

ಅಲ್ಲಿ ಮತ್ತೆ ಸ್ವಲ್ಪ ಅಂದ್ರೆ ಬಾಳಸ್ಟೇ  ಕ್ಯಾಮೆರಾಗೆ ಪೋಸ್ ಕೊಟ್ವಿ... ಬೆಟ್ಟದ ಮೇಲೆ ನಿಂತು ಉಗಿಬಂಡಿ ಹೋಗುವದನ್ನು  ನೋಡಿದ್ರೆ ಹೇಗಿರುತ್ತೆ ಅಂತಿರ ಅದಕ್ಕ ಉತ್ತರ ಈ ಕೆಳಗಿನ ಫೋಟೋ ನೋಡಿ ನೀವೇ ಹೇಳಿ
ಉಗಿಬಂಡೆ ಛೇದ ...:)


ನಿಜಗಳ್  ಬೆಟ್ಟ


ನಿಜಗಳ್  ಬೆಟ್ಟ

ಉಲ್ಟಾ ಪಲ್ಟಾ ಪೋಸ್ 

ನಿಜಗಳ್  ಬೆಟ್ಟ

ನಿಜಗಳ್  ಬೆಟ್ಟ

ನಿಜಗಳ್  ಬೆಟ್ಟ


ಬೆಟ್ಟದ ಮೇಲೆ ಸ್ವಲ್ಪ ಸುತ್ತಾಡಿ .. ಕೆಳಗೆ ಇಳಿಯೋದಕ್ಕೆ ಶುರು ಮಾಡಿದ್ವಿ.. 
ಇನ್ನು ತುಂಬಾ ಸಮಯವಿರುವದ್ರಿಂದ ಸಿದ್ದಗಂಗ  ಮಠಕ್ಕೆ  ಹೋಗಿಬರೋಣ ಅಂತ  ಅಲ್ಲಿಗೆ ಹೊರೆಟೆವು.. 
ಅಲ್ಲಿ ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿರೋ ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿ ದರ್ಶನ ಪಡೆದು .. ಸಿದ್ದಗಂಗೆಗೆ ನಮಸ್ಕರಿಸಿ.. ಅಲ್ಲೇ ರಸ್ತೆ ಬದಿ ಮಾರುತ್ತಿದ್ದ ಮಾವಿನ ಕಾಯಿ ನೋಡಿ  ಬಾಯಲ್ಲೆಲ್ಲಾ ನೀರು ಬಿಡೋದಕ್ಕೆ ಶುರು ಮಾಡ್ತು ಇನ್ನೇನು ಅಂತೀರ ಮಾವಿನಕಾಯಿ ತಗೊಂಡು ಅದರ ಜೊತೆ ಸ್ವಲ್ಪ ಉಪ್ಪು ಸ್ವಲ್ಪ ಖಾರ ಬೆರೆಸಿ ತಿಂದರು ನೋಡ್ರಿ....(ನಿಮಗೂ ಇವಾಗ ಬಾಯಲ್ಲಿ ನೀರು ಬಿಡಿತ್ತಿದೆಯೇ  ...!!!!!).  



ಸಿದ್ದಗಂಗಾ ಮಠ 

ಸಿದ್ದಗಂಗಾ ಮಠ 

ಸಿದ್ದಗಂಗಾ ಮಠ 

ಸಿದ್ದಗಂಗಾ ಮಠ 

ಶಿವಕುಮಾರ್ ಸ್ವಾಮೀಜಿ 

ಶಿವಕುಮಾರ್ ಸ್ವಾಮೀಜಿ 


ಸಿದ್ದಗಂಗಾ ಮಠ 

ಸಿದ್ದಗಂಗಾ ಮಠ 
ಸಿದ್ದಗಂಗಾ ಮಠ 

ಹೊಟ್ಟೆ ಹಸಿದು ಸ್ವಲ್ಪ ಚುರುಗುಡೋಕ್ಕೆ ಶುರು ಮಾಡಿತ್ತು .. ಇಂಚರ ಹೋಟೆಲ್ಗೆ ಹೋಗಿ ಮಸ್ತ್ ಊಟ ಮಾಡಿ.. ಬೆಂಗಳೂರಿನ ಕಡೆ ಸಾಗಿತು ನಮ್ಮ ಪಯಣ.. 

ಮಸ್ತ್ ಊಟ  

ಊಟ ಆಯ್ತು ಇನ್ನು ಕೂಲ್ಡ್ರಿಂಕ್ಸ್ ಸಮಯ 

ಊಟ ಮುಗಿಸಿ ಅಲ್ಲಿಂದ ಬೆಂಗಳೂರಿನ ಕಡೆಗೆ ಹೊರಟು ಸಾಯಂಕಾಲ ಸುಮಾರು 4ಕ್ಕೆ ಬೆಂಗಳೂರು ಸೆರಿದ್ವಿ... 
ಟ್ರೆಕ್ಕಿಂಗ್  ಯಶಸ್ವಿ  ಆಯ್ತು ... ಒಬ್ಬರಿಗೊಬ್ಬರು  ಕ್ರ್ತಜ್ನತೆಗಳನ್ನು  ಹೇಳಿ.. ಆ ಗಿಜಿಬಿಜಿ ಬೆಂಗಳೂರಿನಲ್ಲಿ ಎಲ್ಲರೂ ತಮ್ಮ ತಮ್ಮ ಮನೆಕಡೆಗೆ ಮಾಯವಾದರು... 



ಕೃತಜ್ಞತೆಗಳು:-
ಚೈತನ್ಯಕುಮಾರ್  ಎ   ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ ಗೆಳೆಯ ಗೆಳತಿಯರಾದ ಚೈತನ್ಯಕುಮಾರ್, ಹರೀಶ್, ಸಂಗಮೇಶ್, ವಿನಯಕುಮಾರ್, ಶಬ್ಬೀರ್, ಶ್ರೀ, ಮತ್ತು ಆಂಟೋನಿ  ... 


ಇದೊಂದು ಸುಮ್ಮನೆ ಬರೆದಿರೋ ಮೊದಲ ಬರೆಯೋ ಅನುಭವದ ಚಹಾ ಚೂಡಾ ಜೊತೆ ಒಂದೆರಡು ಮಾತುಗಳು ...... 

....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....