Tuesday 7 May 2013

ಹೀಗೊಂದು Weekend ಮಸ್ತಿ - ಶಿವಗಂಗೆ/ಶಿವಗಂಗಾ ( Trek to Shivagange/shivaganga - 5th May 2013)





ಶಿವಗಂಗೆ

ಶಿವಗಂಗೆ (ಶಿವಗಂಗಾ):-

ಶಿವಗಂಗೆ ಇರೋದು ಬೆಂಗಳೂರಿಂದ ತುಮಕೂರು ಮಾರ್ಗದಲ್ಲಿ ಸುಮಾರು 60 ಕಿ.ಮೀ.ದೂರದಲ್ಲಿ
ಇದೊಂದು ಧಾರ್ಮಿಕ ಮತ್ತು ಪ್ರವಾಸಿ ತಾಣ.  ಧಾರ್ಮಿಕ ಮತ್ತು ಟ್ರೆಕ್ಕಿಂಗ್ ಹೋಗುವವರಿಗೆ ಇದೊಂದು ಹೇಳಿ ಮಾಡಿಸಿರೋ Two-in-One ಸ್ಥಳ.  ವೀಕೆಂಡಲ್ಲಿ ಒಂದು ದಿನದ  ಪ್ರವಾಸ/ಟ್ರೆಕ್ಕಿಂಗ್ ಹೋಗಿ ಮಸ್ತ್ ಎಂಜಾಯ್ ಮಾಡಿ ಬರೋರಿಗೆ ರಸಗುಲ್ಲ ತಿಂದಂಗೆ.
ಇದೊಂದು ಧಾರ್ಮಿಕವಾಗಿ ಪವಿತ್ರ ಸ್ಥಳ. ಇಲ್ಲಿ ಪಾತಳಗಂಗೆ, ಒಳಕಲ್ಲು ತೀರ್ಥ, ನಂದಿ(ಬಸವ) ಮತ್ತು ವೀರಭದ್ರೇಶ್ವರ ದೇವಾಲಯಗಳಿವೆ . ಶಿವಗಂಗೆಗೆ ಇನ್ನೊಂದು ಹೆಸರೇ ದಕ್ಷಿಣದ ಕಾಶಿ. ಇಲ್ಲಿನ ಇನ್ನೊಂದು ಮಹಿಮೆ ಅಂದರೆ ನೀವೇನಾದರು ತುಪ್ಪದ ಅಭಿಷೇಕ ಮಾಡಿಸಿದ್ರೆ ಅದು ಬೆಣ್ಣೆಯಾಗುತ್ತೆ

 ಬೆಟ್ಟದ ಬಗ್ಗೆ ನಾ ಬಾಳ ಹೇಳಾಕ ಹೋಗಂಗಿಲ್ಲ.. ಎಲ್ಲಾ ನಾನೇ ಬರೆದರೆ ಹೆಂಗ್ರೀ..  ನೀವು ಒಂದಿಷ್ಟು ಗೂಗಲಲ್ಲಿ ಹುಡುಕ್ರಿ.. :)


ಪ್ರವಾಸ ಕಥನ/ಟ್ರೆಕ್ಕಿಂಗ್  ವಿವರ:-

ಬೆಳಿಗ್ಗೆ 6:30  ಕ್ಕೆ ಎಲ್ಲರೂ ಮೆಜೆಸ್ಟಿಕ್ ಹತ್ತಿರವಿರೋ ವಾಯು ವಜ್ರ ಬಸ್ stop ಹತ್ತಿರ ಬಂದು ಸೇರಿದರು(ನನ್ನನು ಬಿಟ್ಟು). ಹರೀಶ್ ಅವರ್ನೆಲ್ಲ ಬಿಟ್ಟು ನನ್ನನ್ನು ಪಿಕ್ ಮಾಡೋಕೆ ಬಂದ. 
ನಾನು ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮತದಾನ ಮಾಡಬೇಕಾಗಿರೋದ್ರಿಂದ ಬೈಕ್ ಮೇಲೆ ಬಂದು ಟ್ರೆಕ್ಕಿಂಗ್ ಮುಗಿದ ಮೇಲೆ ಬೇಗ ಮರಳಿ ಬೆಂಗಳೂರಿಗೆ ಬಂದು ನನ್ನ  ಅತ್ಯಮೂಲ್ಯವಾದ ಮತವನ್ನು ಚಲಾವಣೆ ಮಾಡಬೇಕು ಅಂತ, ನಾನು ಮತ್ತು ಹರೀಶ್ ಬೈಕ್ ಮೇಲೆ ಪ್ರಯಾಣ ಅಂತ ಡಿಸೈಡ್ ಮಾಡಿದ್ವಿ. 
ಅದ್ಯಾಕೋ ಮಾರಾಯ ಈ ರಾಜಕೀಯ ಕಂಡರ ಇತ್ತಿತ್ಲಾಗೆ ನಮಗೆ ಬಾಳ ಸಿಟ್ಟ(ಕೋಪ) ಬರ್ತಾದ.. ನಾವು voting is a right ಅಂತ ವೋಟು ಹಾಕಿ ಈ ರಾಜಕಾರಣಿಗಳನ್ನ ಗೆಲ್ಲಿಸಿ ಮೆರವಣಿಗೆ ಮಾಡಿ ಬೆಂಗಳೂರಿಗೆ ಹೋಗಿ ವಿಧಾನಸಭೆಯಲ್ಲಿ ಸ್ವಲ್ಪ ಜಗಳ ಮಾಡಿ ನಮ್ಮೊರಿಗೂ ಸ್ವಲ್ಪ ಎಲ್ಲರಿಗೂ ಒಳ್ಳೆದಾಗಂಗೆ ಒಂದಿಷ್ಟು ಕೆಲಸ ಮಾಡಿ ಉಧ್ದಾರ ಮಾಡ್ರೋ ಅಂದ್ರ ಇವರೇನು ಮಾಡ್ತಾರ ಗೊತ್ತೇನ್ರಿ . 
ಚುನಾವಣಾ ಟೈಮ್ನ್ಯಾಗ ಒಂದಿಷ್ಟು ರೋಖ(ಹಣ) ಮತ್ತು ಎಣ್ಣೆ (ಸರಾಯಿ) ಹಂಚತಾರ. ಒಂದ್ ಸಾರಿ ಗೆದ್ರು ಅಂದ್ರ ಮುಗಿತು, ಮುಂದಿನ ಐದು ವರ್ಷ ಅವರು ಚುನಾವಣೆ ಟೈಮಲ್ಲಿ ಕರ್ಚು ಮಾಡಿರೋದಕ್ಕೆ ಬಡ್ಡಿ, ಚಕ್ರ ಬಡ್ಡಿ, ಅದರ ಅಜ್ಜಿ, ಅಜ್ಜನ ಬಡ್ಡಿ ಇನ್ನೂ ಏನೇನೊ ಸೇರಿಸಿ ಲೆಕ್ಕ ಮಾಡಿ ಎಳ್ಳಷ್ಟು ಬಿಡದಂಗೆ ವಸೂಲಿ ಮಾಡ್ತಾರ. 
ಇನ್ನೊಂದು ಹೇಳಬೇಕಂದ್ರ ಚುನಾವಣೆಗೂ ಮುಂಚೆ ಈ ರಾಜಕಾರಣಿಗಳ ಆಸ್ತಿ ಕಡಿಮೇನೆ ಇರುತ್ತೆ. ಆದರೆ ಗೆದ್ದ ಮೇಲೆ ಇವರ ಆಸ್ತಿ ಹೇಗೆ ಬೆಳೆಯುತ್ತೆ ಅಂದ್ರೆ, ಮಲ್ಟಿ speciality ಹಾಸ್ಪಿಟಲಲ್ಲಿ ಬಡ ರೋಗಿಗೆ ಡಾಕ್ಟರು ಬಿಲ್ ತೋರಿಸಿದಾಗ ಅದನ್ನ ನೋಡಿ ಅವನ BP ಹೆಂಗೆ ಹೈ ಸ್ಪೀಡಲ್ಲಿ ಏರುತ್ತೋ ಹಂಗೆ ಇವರ ಆಸ್ತಿ ಕೂಡ ವರ್ಷ ಕಳೆದಂತೆಲ್ಲ ಲೆಕ್ಕ ಮಾಡೋದಕ್ಕೆ ಮಷೀನ್ ಬೇಕೇ ಬೇಕು ಅನ್ನೋ ಹಾಗೆ ಬೆಳಿತಾ ಹೋಗುತ್ತೆ..

"ಇವರೇನು ಬದಲಾಗಾಂಗಿಲ್ಲ ನಮ್ಮ ದೇಶ ಉದ್ದಾರಾಗಾಂಗಿಲ್ಲ ನಡೀರಿ ಅತ್ಲಾಗ"
ಸಾಕು ಬಿಡ್ರಿ ಇವರ ಬಗ್ಗೆ ಮಾತಾಡಿದರ ನಮ್ದ ಟೈಮ್ ವೇಸ್ಟ್....  ನಮ್ ಟ್ರೆಕ್ಕಿಂಗ್ ಕಡೆ ಹೊಗಾನು ಬರ್ರೀ, 

 ಬೆಳಿಗ್ಗೆ 6:45  ಕೆಂಪೆಗೌಡ ಬಸ್ ನಿಲ್ದಾಣದಿಂದ 12 ಜನರು KSRTC ಬಸ್ಸಲ್ಲಿ ಹೊರಟರು. ಹರೀಶ್ ಮತ್ತು ನಾನು ಬೈಕ್ ಮೇಲೆ ಅವರಿಗಿಂತ ಸ್ವಲ್ಪ ಮುಂದೇನೆ ಹೋಗಿ ದಾಬಸಪೇಟೆ ಹತ್ತಿರ ಕಾಯುತ್ತಿದ್ದೆವು. 
ಎಲ್ಲರೂ ದಾಬಸಪೇಟೆಯಲ್ಲಿ ಬೆಳಿಗ್ಗೆ 7:45 ಕ್ಕೆ ಸೇರಿದೆವು. ಚುನಾವಣೆ ಇರೋದ್ರಿಂದ ಹೊಟೆಲಗಳೆಲ್ಲ ಮುಚಿದ್ದವು. ನಮ್ಮ ಪುಣ್ಯಾಕ್ಕೆ ಅನ್ನೋ ಹಂಗ ಅಲ್ಲೇ ಒಂದು ಚಿಕ್ಕ ಹೋಟೆಲ್ ತಗೆದಿತ್ತು. ತಟ್ಟೆ ಇಡ್ಲಿ ಮತ್ತು ರೈಸ್ ಬಾತ್ ತಿಂದು ಮದ್ಯಾನ ಊಟಕ್ಕೆ ರೈಸ್ ಬಾತ್ ಪಾರ್ಸೆಲ್ ಮಾಡಿಸ್ಕೊಂಡ್ವಿ. ಅಲ್ಲಿಂದ ನಾನು ಮತ್ತು ಹರೀಶ್ ಬೈಕ್ ಮೇಲೆ ಮತ್ತು ಉಳಿದವರೆಲ್ಲ ಒಂದು ಆಟೋದಲ್ಲಿ ಶಿವಗಂಗೆಗೆ ಹೊರೆಟೆವು...  


ಆಟೋದಲ್ಲಿ ಶಿವಗಂಗೆ ಊರಿಗೆ ಸೇರೋಡ್ರೋಳ್ಗೆ ಸಮಯ ಬೆಳಿಗ್ಗೆ 9 ಆಗಿತ್ತು. ಚುನಾವಣೆ ಇರೋದ್ರಿಂದ ವಾಹನಗಳನ್ನು ವೋಟಿಂಗ್ ಕೋಣೆಗೆ ಹತ್ತಿರ ಬಿಡೋದಿಲ್ಲ ಆದ ಕಾರಣ ಆಟೋದವನು ನಮ್ಮನ್ನ ಸ್ವಲ್ಪ ದೂರದಲ್ಲಿಯೇ ಬಿಟ್ಟು ಹೋದ, ಅಲ್ಲಿಂದ ಬೆಟ್ಟದ ಮುಖ್ಯ ದ್ವಾರಕ್ಕೆ ನಡಿಯೋಕೆ ಮತ್ತೆ 10 ನಿಮಿಷಗಳು ಬೇಕಾಯ್ತು . 
ಹಂಗೋ ಹಿಂಗೋ ಮಾಡಿ ಬೆಳಿಗ್ಗೆ 9:15 ಕ್ಕೆ ಮುಖ್ಯ ದ್ವಾರದ ಹತ್ತಿರ ಗ್ರೂಪ್ ಫೋಟೋ ತಗೆದುಕೊಳ್ಳುವ ಮೂಲಕ ನಮ್ಮ ಟ್ರೆಕ್ಕಿಂಗ್ ಶುರು ಮಾಡಿದ್ವಿ.

ಶಿವಗಂಗೆ ಬೆಟ್ಟದ ಮುಖ್ಯ ದ್ವಾರ

ಶಿವಗಂಗೆ

ಶಿವ

@ ಶಿವಗಂಗೆ

@ ಶಿವಗಂಗೆ

ಆವಾಗಲೇ ಬಿಸಿಲಿನ ರೌದ್ರಾವತಾರ  ಚಾಲು ಆಗಿತ್ತು. ಸುಡು ಬಿಸಿಲಿನಲ್ಲೇ ಬೆಟ್ಟ ಹತ್ತುತ್ತಿದ್ದೆವು.  ಬಿಸಿಲಿನ ಪ್ರಭಾವದಿಂದ ಎಲ್ಲರಿಗೂ ಬೇಗನೆ ಆಯಾಸವಾಗುತ್ತಿತ್ತು.  ಮೆಟ್ಟಿಲುಗಳಿದ್ದರೂ ಕೂಡ ಬಿಸಿಲಿಗೆ ಬೆವರು ಸುರಿಯೋದಕ್ಕೆ ಪ್ರಾರಂಬಿಸಿರೋದ್ರಿಂದ ನಮಗೆ ಹತ್ತೋಕೆ ಕಷ್ಟ ಅನಿಸುತ್ತಿತ್ತು.  ಆದರೂ ಯಾರು ಟ್ರೆಕ್ಕಿಂಗ್ ಹುಮ್ಮಸ್ಸನು ಕಳೆದುಕೊಳ್ಳದೆ ನಡೆ ಮುಂದೆ ನೀ ನಡೆ ಮುಂದೆ ಅಂತ ಸಾಗುತಲಿದ್ದರು.  ಮಾರ್ಗ ಮಧ್ಯೆ ತುಂಬಾನೆ ಅಂದ್ರೆ ತುಂಬಾನೇ ವಿಶ್ರಾಂತಿ ತಗೆದುಕೊಳ್ಳುತ ನಡೆದಿತ್ತು ನಮ್ಮ ಟ್ರೆಕ್ಕಿಂಗ್ ಪಯಣ. ಹಾದೀಲಿ ಬಹಳಷ್ಟು ಗೋಪುರಗಳು ಮತ್ತು ದೇವಸ್ಥಾನಗಳಿವೆ. ನಾವು ಬಿಸಿಲಲ್ಲಿ ಬೆವತಿದ್ದರು ಫೋಟೋಸ್ ಗೆ ಪೋಸ್ ಕೊಡೋದು ಮಾತ್ರ ನಿಲ್ಲಿಸ್ತಿರಲಿಲ್ಲ..

ಒಳಕಲ್ಲು ತೀರ್ಥ ಗುಡಿಗೆ ಬಂದು ಕೆಲವರು ವಿಶ್ರಾಂತಿ ತಗೆದುಕೊಂಡರು. ನಾನು ಮತ್ತು ಇನ್ನು ಕೆಲವರು ಅಲ್ಲೇ ಇರುವ ದೇವಸ್ಥಾನದ ದರ್ಶನಕ್ಕೆ ಹೋದ್ವಿ. 
ಈ ಒಳಕಲ್ಲು ತೀರ್ಥ ಸಿಗೋದು ಒಂದು ದೊಡ್ಡ ಕಲ್ಲು ಬಂಡೆಯಲ್ಲಿರೋ ದೇವಸ್ಥಾನದಲ್ಲಿ.  ಪ್ರಾರ್ಥನೆ ಮಾಡಿ ಮನಸಿನಲ್ಲಿ ಏನಾದ್ರು ಬೇಡಿಕೊಂಡು ಈ ಒಳಕಲ್ಲಿನಲ್ಲಿ ಕೈ ಹಾಕಿದರೆ ನೀರು ಸಿಗುತ್ತೆ ಅನ್ನೋ ಜನರ ನಂಬಿಕೆ ಇದೆ. ನಮ್ಮಲ್ಲಿ ಕೆಲವರಿಗೆ ಈ ಪವಿತ್ರ ತೀರ್ಥ ಕೈಗೆ ಸಿಕ್ಕಿತು ಮತ್ತು ಕೆಲವರ ಕೈಗಳು ಚಿಕ್ಕದಾಗಿರೋದ್ರಿಂದ ಮರಳಿ ಮರಳಿ ಪ್ರಯತ್ನಿಸಿದರೂ ನೀರು ಸಿಗಲಿಲ್ಲ.
ಈ ದೇವಸ್ಥಾನದ ಬಗ್ಗೆ ಇನ್ನೊಂದು ಸ್ವಲ್ಪ ಹೇಳಬೇಕಂದ್ರೆ ಒಳಗಡೆ ಅದು ತುಂಬಾ ತಣ್ಣಗಿದೆ. ಅಲ್ಲೇ ಕುಳಿತುಬಿಡೋಣ ಅನಿಸ್ತಿತ್ತು. ಮತ್ತೆ ಸ್ವಲ್ಪ ಕ್ಯಾಮೆರಾಗೆ ಪೋಸ್ ಕೊಟ್ಟು ಮುಂದೆ ಸಾಗಿದೆವು.

ಒಳಕಲ್ಲು ತೀರ್ಥ


ಒಳಕಲ್ಲು ತೀರ್ಥ


ನೋಡ್ರಿಪಾ ಯಾರಿಗೆ ಸಿಕ್ಕಿಲ್ಲ ಇಲ್ಲಿಂದಾನೆ  ಒಳಕಲ್ಲು ತೀರ್ಥ ತಗೋರಿ

ಒಳಕಲ್ಲು ತೀರ್ಥ

ಒಳಕಲ್ಲು ತೀರ್ಥ

ಒಳಕಲ್ಲು ತೀರ್ಥ

ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು. ಪಕ್ಕದಲ್ಲೇ ಇರುವ ಜ್ಯೂಸು ಅಂಗಡಿಯಲ್ಲಿ ತಂಪಾದ ಮಜ್ಜಿಗೆ ಮತ್ತು ಲೆಮನ್ ಜ್ಯೂಸು ಕುಡಿದೆವು. ಎಂಜಿನುಗಳೆಲ್ಲ ಇಂಧನವಿಲ್ಲದೆ ಮುಂದೆ ಸಾಗೊಕಾಗದೆ ಬೆವತಿರೋ ಸಮಯದಲ್ಲಿ ಈ ಜ್ಯೂಸು ಮತ್ತೆ ಶುದ್ದೀಕರಿಸಿರುವ ಇಂಧನ ತುಂಬಿದಂಗಾಯಿತು. 


ಶಿವಗಂಗೆ 

ಶರಬತ್(ಜ್ಯೂಸು) ಕುಡಿಯುವ ಸಮಯ

ಇಲ್ಲಿಂದಾನೆ ಅಸಲಿ ಟ್ರೆಕ್ಕಿಂಗ್ ಶುರುವಾಗೋದು..   ಸುಮಾರು 75 - 80 ಡಿಗ್ರೀ ಇಳಿಜಾರಿಗೆ ಅಭಿಮುಖವಾಗಿರೋ ಬೆಟ್ಟ ಹತ್ತಬೇಕು. ಮೆಟ್ಟಿಲುಗಳಿವೆ ಮತ್ತು ಆಸರೆಗೆ rails ಹಾಕಿದ್ದಾರೆ. ಇನ್ನೊಂದು ವಿಷಯ ಹೇಳೋದೇ ಮರ್ತಿದ್ದೆ ಈ ಬೆಟ್ಟದಲ್ಲಿ ವಾನರ ಸೈನ್ಯ ತುಂಬಾ ಬಲಿಷ್ಟವಾಗಿದೆ. ನೀವು ಅಪ್ಪಿ ತಪ್ಪಿ ಮೈ ಮರೆತು ಬೆಟ್ಟ ಹತ್ತುತ್ತಿದ್ದರೆ ನಿಮ್ಮ ಬ್ಯಾಗುಗಳನ್ನ ಕಿತ್ತುಕೊಂಡು ಹೋಗುತ್ತವೆ. ಅಲ್ಲಿಂದ ಮುಂದೆ ಹೋದರೆ ನಂದಿ ವಿಗ್ರಹವಿದೆ.. ನಂದಿಗೆ ನಮಸ್ಕರಿಸಿ ಮತ್ತೆ ಕ್ಯಾಮೆರಾಗೆ ಪೋಸ್ ಕೊಟ್ಟು ಮುಂದೆ ಸ್ವಲ್ಪ ಸಾಗಿ ಬೆಟ್ಟದ ತುದಿ ಮುಟ್ಟಿದೆವು .

@ ಶಿವಗಂಗೆ

@ ಶಿವಗಂಗೆ


@ ಶಿವಗಂಗೆ


ಬಸವ (ನಂದಿ)

@ ಶಿವಗಂಗೆ

@ ಶಿವಗಂಗೆ



ಬೆಟ್ಟದ ಮೇಲೆ ಹೋಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟು. ಸ್ವಲ್ಪ ಸುತ್ತಾಡಿ, ಬೆಟ್ಟದ ಮೇಲಿಂದ ಸುತ್ತಲಿನ ಪ್ರಕೃತಿಯನ್ನ ನೋಡಿದರೆ ಯಾರೋ ಕಲೆಗಾರ ಕಲೆಯಲ್ಲಿ ಮೈ ಮರೆತು ಚಿತ್ರಿಸಿದ್ದಾನೇನೋ ಅಂತ ಭಾಸವಾಗುತ್ತಿತ್ತು . ಅದೆಷ್ಟು ಚೆಂದ, ಅದೆಷ್ಟು ಅಂದ. ಆ ಪ್ರಕೃತಿಯ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾದ್ಯವೇ?.  ಆ ಬೆಟ್ಟದ ಮೇಲೆ ನಿಂತು ಒಂದು ಸುತ್ತು ನೋಡಿದರೆ, ಅಲ್ಲಲ್ಲಿ ಕಾಣೋ ಚಿಕ್ಕ ಚಿಕ್ಕ ಹಳ್ಳಿಗಳು. ಬಯಲು ಸೀಮೆಯಲ್ಲೂ ಅಲ್ಲಲ್ಲಿ ತೋಟ, ಹೊಲ, ಗದ್ದೆ, ಚಿಕ್ಕ ಚಿಕ್ಕ ಕೆರೆ-ಕಟ್ಟೆಗಳು. ಸೃಷ್ಟಿಸಿರೋ ಭಗವಂತ ಸಂತೋಷವನ್ನ ಈ ಪ್ರಕೃತಿಯ ಜೊತೆಗೆ ಇಟ್ಟಿದ್ದಾನೆ. ಹುಡುಕೋ ಪ್ರಯತ್ನ ಮಾಡಿದ್ರೆ ಖಂಡಿತ ಆ ಸಂತೋಷ ನಮಗೆ ಸಿಗುತ್ತದೆ ಈ ಪ್ರಕೃತಿಯ ಮೂಲಕ. ಮುಂಜಾನೆ ಅಥವಾ ಸಂಜೆ ಬೆಟ್ಟ ಹತ್ತಿದ್ದರೆ ಹಕ್ಕಿಗಳ ಇಂಚರ ಕೆಳುತ್ತಿದ್ದವೇನೋ ಆದರೆ ಮದ್ಯಾಹ್ನ ಸುಡು ಬಿಸಿಲಿನಲ್ಲಿ ಅವು ಯಾವ ಮರದ ಪೊಟರೆಯ ತಂಪಿನಲ್ಲಿ ನಿದ್ರಿಸುತ್ತಿದ್ದವೋ .


@ ಶಿವಗಂಗೆ




@ ಶಿವಗಂಗೆ

@ ಶಿವಗಂಗೆ


ಹಂಗ ನನ್ photography

ಹಂಗ ನನ್ photography

ಹಂಗ ನನ್ photography

ಹಂಗ ನನ್ photography

ಪುಷ್ಕರಿಣಿ 

@ ಶಿವಗಂಗೆ

@ ಶಿವಗಂಗೆ

@ ಶಿವಗಂಗೆ

@ ಶಿವಗಂಗೆ

@ ಶಿವಗಂಗೆ

ಯಾಹೂ ಟ್ರೆಕ್ ಮಸ್ತ್ ಮಸ್ತ್




ಸ್ವಲ್ಪ ವಿಶ್ರಾಂತಿ ತಗೆದುಕೊಂಡು ಸುಮಾರು ಮದ್ಯಾಹ್ನ 1:40ಕ್ಕೆ ಕೆಳಗಿಳಿಯೋದಕ್ಕೆ ಶುರುಮಾಡಿದ್ವಿ ಒಳಕಲ್ಲು ತೀರ್ಥವಿರೋ ದೇವಸ್ಥಾನದ ಹತ್ತಿರ ಒಂದು ಚಿಕ್ಕ ಮಂಟಪ/ಮನೆಯಲ್ಲಿ ಊಟ ಮಾಡಿ, ಅಲ್ಲಿಂದ ಹೊರಟು ಸುಮಾರು ಮದ್ಯಾಹ್ನ 2:50ಕ್ಕೆ ಮುಖ್ಯ ದ್ವಾರ ತಲುಪಿದ್ವಿ.
@ ಶಿವಗಂಗೆ


BTC ಪರಿವಾರದಿಂದ ಮತ್ತೊಂದು ಯಶಶ್ವಿ ಟ್ರೆಕ್ಕಿಂಗ್ ಮಾಡಿದ್ವಿ.  ಎಲ್ಲರಿಗೂ ನಾನು ಮತ್ತು ಹರೀಶ ಕೃತಜ್ಞತೆಗಳನ್ನು ಹೇಳಿ ಬೈಕ್ ಮೇಲೆ ಬೆಂಗಳೂರಿಗೆ ಹೊರೆಟೆವು. ಉಳಿದವರೆಲ್ಲ ಆಟೋದಲ್ಲಿ ದಾಬಸಪೇಟೆಗೆ ಬಂದು ಅಲ್ಲಿಂದ ಬೆಂಗಳೂರಿನ ಬಸ್ಸಲ್ಲಿ ಅಂದರೆ ಬಸ್ಸಿನ ಮೇಲೆ ಕುಳಿತು ಮಸ್ತ್ ಮಜಾ ಮಾಡುತ ಸಾಯಂಕಾಲ 5:40 ಕ್ಕೆ ಬೆಂಗಳೂರು ಸೇರಿದರು (ಚುನಾವಣೆ ಇರೋದ್ರಿಂದ ಸರಕಾರಿ ಬಸ್ಸುಗಳೆಲ್ಲ ಚುನಾವಣಾ ಕೆಲಸಕ್ಕೆ ತಗೆದುಕೊಂಡಿದ್ದರು ಆದುದರಿಂದ ಬಸ್ಸಿನ ಮೇಲೆ ಕುಳಿತು ಪ್ರಯಾಣಿಸೋ ಸೌಭಾಗ್ಯ ನಮ್ಮ ಟ್ರೆಕ್ಕಿಂಗ್ ಪರಿವಾರಕ್ಕೆ ದೊರಕಿತು).. 



ಕೃತಜ್ಞತೆಗಳು:-
ಚೈತನ್ಯಕುಮಾರ್  ಎ   ( ಟ್ರೆಕ್ಕಿಂಗ್  ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ ಗೆಳೆಯ ಗೆಳತಿಯರಾದ ಹರೀಶ್, ವಿನಯಕುಮಾರ್, ಶಬ್ಬೀರ್, ಶ್ರುತಿ, ಸೋಮು ನಿಡೋಣಿ, ವರುಣ್, ಗೌತಮ್, ವೀರು, ದೀಪಿಕಾ, ದೀಪಕ್, ವಿವೇಕ್ ಮತ್ತು ನಾನು 

ವಿಶೇಷ ಕೃತಜ್ಞತೆಗಳು:- 
ಈ ಬ್ಲಾಗ್ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬರಲು ನನಗೆ ಬರೆಯಲು ಸಹಾಯ ಮಾಡಿದ ನನ್ನ ಗೆಳೆಯ ಸುರೇಂದ್ರಕುಮಾರ್  (ಮಧುಗಿರಿ) 


ಮಾಹಿತಿ:-

ಟ್ರೆಕ್ಕಿಂಗ್ ದೂರ : ಸುಮಾರು 4 ಕಿ.ಮೀ.
ಬೆಟ್ಟ ಹತ್ತುವ ದೂರ: ಮುಖ್ಯ ದ್ವಾರದಿಂದ ಬೆಟ್ಟದ ತುದಿಗೆ ಸುಮಾರು ಕಿ.ಮೀ..
ಬೆಟ್ಟ ಇಳಿಯುವ ದೂರ: ಬೆಟ್ಟದ ತುದಿಯಿಂದ ಕೆಳಗಿರೋ ಮುಖ್ಯ ದ್ವಾರಕ್ಕೆ ಸುಮಾರು ಕಿ.ಮೀ.

ಹತ್ತಿರದ ಪಟ್ಟಣ: ದಾಬಸಪೇಟೆ


ಸ್ಥಳ: ಶಿವಗಂಗೆ, ತುಮಕೂರು  ತಾಲೂಕು ಮತ್ತು ಜಿಲ್ಲೆ 
ದೂರ: 60 ಕಿ.ಮೀ.
ಬೆಂಗಳೂರಿನಿಂದ  ದಾಬಸಪೇಟೆಗೆ  52 ಕಿ.ಮೀ. ಮತ್ತು ದಾಬಸಪೇಟೆಯಿಂದ ಶಿವಗಂಗೆ 8 ಕಿ.ಮೀ.
ಹೋಗುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ:-
ಬೆಂಗಳೂರು( NH-4 Highway)-->ದಾಬಸಪೇಟೆ -->ಶಿವಗಂಗೆ  



For more details in English;-

My friends have written very good blogs, have a look at these blogs too.







....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....




3 comments:

Harish Surampade said...

Prathi kshana vannu nenapu madikondu praasa katti namma payana vannu namageye nenapisi kottiddake tumba prashamse galu tamage.

Manu Kumar said...

ಮೊದಲು ನೀವು ಹಾಕಿರೋ ಶಿವಗಂಗೆ ವಿಳಾಸ ತೆಗೆಯಿರಿ
ಶಿವಗಂಗೆ ಇರೋದು ''ನೆಲಮಂಗಲ ತಾಲೋಕ್ ಬೆಂಗಳೂರು
ಗ್ರಾಮಾಂತರ ಜಿಲ್ಲೆ '' ಯಲ್ಲಿ ತುಮಕೂರು ಜಿಲ್ಲೆಯಲ್ಲಿ ಅಲ್ಲ
ನೀವು ತಪ್ಪದ ವಿಳಾಸ (addrees) ಹಾಕಿದಿರಿ

Manu Kumar said...

ಮೊದಲು ನೀವು ಹಾಕಿರೋ ಶಿವಗಂಗೆ ವಿಳಾಸ ತೆಗೆಯಿರಿ
ಶಿವಗಂಗೆ ಇರೋದು ''ನೆಲಮಂಗಲ ತಾಲೋಕ್ ಬೆಂಗಳೂರು
ಗ್ರಾಮಾಂತರ ಜಿಲ್ಲೆ '' ಯಲ್ಲಿ ತುಮಕೂರು ಜಿಲ್ಲೆಯಲ್ಲಿ ಅಲ್ಲ
ನೀವು ತಪ್ಪದ ವಿಳಾಸ (addrees) ಹಾಕಿದಿರಿ